ನವದೆಹಲಿ[ಫೆ.07] ಮೋದಿ ಅವರು ಮಾಡಿದ ಆರೋಪಕ್ಕೆ ದೇವೇಗೌರು ಸಹ ತಿರುಗೇಟು ನೀಡಿದ್ದಾರೆ. ಇದನ್ನು ಪ್ರಧಾನಿ ವರ್ಸಸ್ ಮಾಜಿ ಪ್ರಧಾನಿ ಎಂದು ಕರೆದರೆ ಡ್ಡಿ ಇಲ್ಲ.

ಭರವಸೆಗಳು ಏನಾದವು ಎಂದು ಪ್ರಶ್ನೆ ಮಾಡಿದ್ದ ಮೋದಿಗೆ ದೇವೇಗೌಡರು ಟ್ವಿಟರ್ ಮೂಲಕ ಉತ್ತರ ನೀಡಿದ್ದಾರೆ. ನಮ್ಮ ಭರವಸೆಗಳು ಏನು? ನಿಮ್ಮ ಭರವಸೆಗಳು ಏನು ಎಂದು ಅಂಕಿ ಅಂಶ ಹಾಜರುಪಡಿಸಿದ್ದಾರೆ.

ಮೋದಿ ಭಾಷಣದ ಅಬ್ಬರ, ‘ಮಹಾಘಟಬಂಧನ್’ಗೆ  ಕೊಟ್ಟ ಟಾಂಗ್..ಅಬ್ಬಬ್ಬಾ!

ನಮ್ಮ ಭರವಸೆ ರೈತರ ಸಾಲಮನ್ನಾ: ಸದ್ಯದ ಸ್ಥಿತಿ- ಅನುಷ್ಠಾನವಾಗುತ್ತಿದೆ,
ಮೋದಿ ಭರವಸೆ: ರಾಮಮಂದಿರ ನಿರ್ಮಾಣ, ಗಂಗಾ ಶುದ್ಧೀಕರಣ, ನದಿ ಜೋಡಣೆ, ಬ್ಯಾಂಕ್‌ ಖಾತೆಗೆ 15 ಲಕ್ಷ ರೂ., - ಸದ್ಯದ ಸ್ಥಿತಿ- ಯಾವುದೇ ಪರಿಣಾಮ ಇಲ್ಲ. ಕರ್ನಾಟಕದಲ್ಲಿ ಆಪರೇಶನ್ ಕಮಲ ಎಂಬ ಕೆಲಸ ಮಾತ್ರ ನಡೆಯುತ್ತಿದೆ ಎಂದು ಟಾಂಗ್  ನೀಡಿದ್ದಾರೆ.