ಚೀನಾಗೆ ಅದರದ್ದೇ ಭಾಷೆಯಲ್ಲಿ ಸಿಗಲಿದೆ ಉತ್ತರ, ITBPಯಿಂದ ವಿಶೇಷ ತಯಾರಿ!

ಚೀನಾದ ದುರಹಂಕಾರಿ ನಡೆಗೆ ಭಾರತ ತಕ್ಕ ಉತ್ತರ ನೀಡಿದೆ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಳಿಕ ಭಾರತ ಡ್ರ್ಯಾಗನ್‌ಗೆ ಪಾಠ ಕಲಿಸಲು ಯಾವುದೇ ಅವಕಾಶ ಬಿಟ್ಟಿಲ್ಲ. ಸದ್ಯ ITBP ಯೋಧರೂ ಚೀನಾಗೆ ಅದರದ್ದೇ ಶೈಲಿಯಲ್ಲಿ ಉತ್ತರಿಸಲು ಸಜ್ಜಾಗಿದ್ದಾರೆ. 

ಹುವೈ ಸೇರಿ ಚೀನಾದ 7 ಕಂಪನಿಗೂ ಭಾರತದಿಂದ ಶಾಕ್?

ಪೂರ್ವ ಲಡಾಖ್‌ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜೊತೆ ಪರೋಕ್ಷ ಸಂಬಂಧ ಹೊಂದಿರುವ ಜಾಗತಿಕ ದೈತ್ಯ ಕಂಪನಿ ಹುವೈ, ಅಲಿಬಾಬಾ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಕೊರೋನಾ ಮರಣ ಪ್ರಮಾಣದಲ್ಲಿ ಬೆಂಗ್ಳೂರನ್ನೂ ಮೀರಿಸಿದ ಮಂಗ್ಳೂರು!...

ಕಡಲನಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಕೊರೋನಾ ಸೋಂಕಿತರ ಜತೆಗೆ ಮರಣ ಪ್ರಮಾಣ (ಡೆತ್‌ರೇಟ್‌) ಕೂಡ ಏರುಗತಿಯಲ್ಲೇ ಸಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿದ್ದರೂ ಡೆತ್‌ರೇಟ್‌ನಲ್ಲಿ ಮಾತ್ರ ಮಂಗಳೂರು ನಗರ ಬೆಂಗಳೂರನ್ನೂ ಮೀರಿಸಿದೆ!

ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಗೇಟ್ ಪಾಸ್ ನೀಡಿದ ಬಿಸಿಸಿಐ!

ಕೊರೋನಾ ವೈರಸ್ ಹೊಡೆತ ನಡುವೆ ಬಿಸಿಸಿಐ ಐಪಿಎಲ್ 2020 ಟೂರ್ನಿ ಆಯೋಜಿಸಲು ಕರಸತ್ತು ನಡೆಸುತ್ತಿದೆ. ಈ ಮೂಲಕ ಸಾವಿರಾರು ಕೋಟಿ ರೂಪಾಯಿ ನಷ್ಟ ಸರಿದೂಗಿಸಲು ಚಿಂತಿಸುತ್ತಿದೆ. ಇದರ ನಡುವೆ ಬಿಸಿಸಿಐ ದಿಢೀರ್ ಆಗಿ ಕ್ರಿಕೆಟ್ ಆಪರೇಶನ್ಸ್ ಮುಖ್ಯಸ್ಥ ಸಾಬಾ ಕರೀಮ್‌ಗೆ ಗೇಟ್ ಪಾಸ್ ನೀಡಿದೆ.

ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ರೇಪ್ ಬೆದರಿಕೆ! ಹಾಕಿದ್ದು ಯಾರು?

ಸುಶಾಂತ್ ಸಿಂಗ್ ಸಾವಿನ ನಂತರ ಮೌನ ಮುರಿದಿದ್ದ ಗೆಳತಿ ರಿಯಾ ಚಕ್ರವರ್ತಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು . ಇದೀಗ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ರೇಪ್ ಮತ್ತು ಕೊಲೆ ಬೆದರಿಕೆ  ಬಂದಿದ್ದು ರಿಯಾ ಸೈಬರ್ ವಿಭಾಗಕ್ಕೆ ದೂರು ನೀಡಿದ್ದಾರೆ.

ಅಮೆರಿಕದ ಬಂಕರ್‌ಗಳಲ್ಲಿ ಭಾರತದ ಕಚ್ಚಾ ತೈಲ ಸಂಗ್ರಹ!

ಅಮೆರಿಕದ ಜೊತೆಗಿನ ತನ್ನ ಸಂಬಂಧವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿರುವ ಭಾರತ, ಇದೀಗ ಅಮೆರಿಕದ ಸಂಗ್ರಹಾಗಾರಗಳಲ್ಲೇ ತನ್ನ ಪಾಲಿನ ಕಚ್ಚಾತೈಲ ದಾಸ್ತಾನ ಮಾಡಲು ಮುಂದಾಗಿದೆ. ಇದೀಗ ಅಂತಾರಾಷ್ಟ್ರೀಯ ತೈಲ ದರ ಈಗ ಕಡಿಮೆ ಇದ್ದು, ತನ್ನ ಪಾಲಿನ ತೈಲವನ್ನು ಅಮೆರಿಕದಲ್ಲಿ ದಾಸ್ತಾನು ಮಾಡಿದರೆ ಲಾಭವಾಗುತ್ತದೆ ಹಾಗೂ ಮುಂದೊಂದು ದಿನ ತೈಲ ಪೂರೈಕೆಯಲ್ಲಿ ವ್ಯತ್ಯಾಸವಾದರೆ ಅಥವಾ ದರ ಏರಿದರೆ, ಈ ತೈಲ ದಾಸ್ತಾನು ದೇಶದ ನೆರವಿಗೆ ಬರಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

12 ಎಕರೆ ವಿಸ್ತೀರ್ಣದ ಬಂಗಲೆಯಲ್ಲಿ ಮೋದಿ ವಾಸ, ಒಳಗಿದೆ ಸುರಂಗ: ಇಲ್ಲಿದೆ ಫೋಟೋಸ್

ಪಿಎಂ ಮೋದಿ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲೇ ಸಮಯ ಕಳೆದಿದ್ದರು. ಅಲ್ಲದೇ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯದ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳೊಡನೆ ನಿರಂತರವಾಗಿ ಅಲ್ಲಿಂದಲೇ ಮಾತುಕತೆ ನಡೆಸಿದ್ದರು. ಪ್ರಧಾನ ಮಂತ್ರಿ ನಿವಾಸದ ಕುರಿತು ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ದಶಕಗಳ ಬಳಿಕ ಮತ್ತೆ ಬರುತ್ತಿದೆ ಯಜ್ಡಿ ಬೈಕ್!

ಭಾರತದಲ್ಲಿ ದಶಕಗಳ ಬಳಿಕ ಜಾವಾ ಮೋಟಾರ್‌ಸೈಕಲ್ ಬಿಡುಗಡೆಯಾಗೋ ಮೂಲಕ ಹೊಸ ಇತಿಹಾಸ ರಚಿಸಿದೆ. 80-90ರ ದಶಕದಲ್ಲಿ ಭಾರತದಲ್ಲಿ ಅಬ್ಬರಿಸಿದ ಜಾವಾ ಇದೀಗ 2020ರಲ್ಲಿ ಮೋಡಿ ಮಾಡುತ್ತಿದೆ. ಇದೀಗ ಜಾವಾ ಮೋಡಿ ಬಳಿಕ ಹಳೇ ಯಜ್ಡಿ ಬೈಕ್ ಮತ್ತೆ ಬಿಡುಗಡೆಯಾಗಲಿದೆ.


ಹೊರಗಡೆ ಹೋಗ್ಬೇಕು, ಅಪ್ಪ ಬಿಡ್ತಿಲ್ಲಾ ಅಂತಿದ್ದಾರೆ ನಟಿ ಕಾಜಲ್..!...

ನಟಿ ಕಾಜಲ್ ಅಗರ್ವಾಲ್ ಅವರೂ ಸಿನಿಮಾ ಸೆಟ್‌ಗೆ ಹೋಗಲು ಬಯಸುತ್ತಿದ್ದಾರೆ. ಆದರೆ ಕೊರೋನಾ ಭಯದಿಂದ ಅವರ ತಂದೆ ಮಾತ್ರ ಮಗಳನ್ನು ಶೂಟ್‌ಗೆ ಹೋಗಲು ಬಿಡುತ್ತಿಲ್ಲ.

ಮಕ್ಕಳ ಶಿಕ್ಷಣಕ್ಕೆ ತೊಂದರೆಯಿಲ್ಲ; ಭರ್ಜರಿ ಪ್ಲಾನ್ ಮಾಡಿದ ರಾಜ್ಯ ಸರ್ಕಾರ..!...

ರಾಜ್ಯದ 8, 9 ಮತ್ತು 10 ನೇ ತರಗತಿ ಮಕ್ಕಳಿಗೆ ದೂರದರ್ಶನದ 'ಚಂದನ' ವಾಹಿನಿ ಮೂಲಕ ಬೋಧನೆ ಮಾಡುವ 'ಸೇತುಬಂಧ' ಜು. 20 ರಿಂದ ಪ್ರಸಾರವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.