ದೇಶ ಬಿಜೆಪಿಯತ್ತ ದೃಷ್ಟಿ ನೆಟ್ಟಿದೆ, ನಮ್ಮ ಗುರಿ ಸ್ಪಷ್ಟವಾಗಿದೆ: ಪ್ರಧಾನಿ ಮೋದಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 4:50 PM IST
PM Narendra Modi Speech at BJP National Convention in New Delhi
Highlights

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಶಕ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ನವದೆಹಲಿ(ಜ.12): ದೇಶದ ಜನತೆ ಬಿಜೆಪಿಯತ್ತ ದೃಷ್ಟಿ ನೆಟ್ಟಿದ್ದು, ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಯುವಂತೆ ಮಾಡಲು ಬಿಜೆಪಿಗೆ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಶಕ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ದೇಶ ಸ್ವಾತಂತ್ರ್ಯಗೊಂಡ ಮೇಲೆ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಪ್ರಧಾನಿಯಾಗಿದ್ದರೆ ಇಂದು ದೇಶದ ಸ್ಥಿತಿ ಬೇರೆಯೇ ಆಗಿರುತ್ತಿತ್ತು. ಅದರಂತೆ 2004ರ ಬಳಿಕವೂ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರೇ ಪ್ರಧಾನಿಯಾಗಿದ್ದರೆ ದೇಶದ ಚಹರೆಯೇ ಬದಲಾಗಿರುತ್ತಿತ್ತು ಎಂದು ಮೋದಿ ಹೇಳಿದರು.

2004ರಿಂದ 2014ರ ಅವಧಿಯು ಭಾರತ ವಿಶ್ವದ ಮುಂದೆ ತಲೆತಗ್ಗಸಿದ ಪರ್ವವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ ಮರ್ಯಾದೆ ಹರಾಜಾಗಿತ್ತು ಎಂದು ಪ್ರಧಾನಿ ಕಿಡಿಕಾರಿದರು.

ಇದೇ ವೇಳೆ ಕೇಂದ್ರದ ಎನ್ ಡಿಎ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ, ನಾಲ್ಕುವರೆ ವರ್ಷಗಳ ಕಾರ್ಯಕಲಾಪದ ಅಭಿವೃದ್ಧಿ ಕಾರ್ಯಗಳನ್ನು ವಿಸ್ತಾರವಾಗಿ ವಿವರಿಸಿದರು.

ಅಲ್ಲದೇ ಅಪನಗದೀಕರಣ, ಜಿಎಸ್ ಟಿ, ತೆರಿಗೆ ಕಾನೂನು, ಉನ್ನತ ವರ್ಗದ ಬಡವರಿಗಾಗಿ ಶೇ.10 ರಷ್ಟು ಉದ್ಯೋಗದಲ್ಲಿ ಮೀಸಲಾತಿ, ತ್ರಿವಳಿ ತಲಾಖ್ ಹೀಗೆ ಹತ್ತು ಹಲವು ವಿಷಯಗಳ ಕುರಿತು ಪ್ರಧಾನಿ ಮೋದಿ ದೀರ್ಘವಾಗಿ ಮಾತನಾಡಿದರು.

ಇನ್ನು ಕಾಂಗ್ರೆಸ್ ವಿರುದ್ಧ ತಮ್ಮ ಭಾಷಣದಲ್ಲಿ ಹರಿಹಾಯ್ದ ಮೋದಿ, ಭ್ರಷ್ಟಾಚಾರ, ವಂಶವಾಹೀ ಆಡಳಿತ ಆ ಪಕ್ಷದ ಮೂಲ ಗುಣ ಎಂದು ಕಿಡಿಕಾರಿದರು. ಕ್ರಿಶ್ಚಿಯನ್ ಮಿಶೆಲ್ ನನ್ನು ರಕ್ಷಿಸಲು ಆ ಪಕ್ಷ ಹೆಣಗುತ್ತಿರುವ ರೀತಿ ನೋಡಿದರೆ ನಗು ಬರುತ್ತದೆ ಎಂದು ಮೋದಿ ಲೇವಡಿ ಮಾಡಿದರು.

ಈ ವೇಳೆ ರಾಮ ಮಂದಿರದ ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಧರ್ಮ ಧರ್ಮಗಳ ನಡುವೆ ಸಮನ್ವಯ ತರುವುದರ ಮೂಲಕ ಸಮಾಜದಲ್ಲಿ ಶಾಂತಿ ತರಲು ನಾವು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಧರ್ಮಗಳ ನಡುವೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದೆ ಎಂದು ಹರಿಹಾಯ್ದರು.

ಇಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಧಾನಿ ನೆರೇಂದ್ರ ಮೋದಿ ಮಾಡಿದ ಭಾಷಣದ ಪೂರ್ಣ ವಿಡಿಯೋ ನಿಮಗಾಗಿ...

"

ಕುಮಾರಣ್ಣ ಸಿಎಂ? ಅಥವಾ ಕ್ಲರ್ಕ್?: ಮೋದಿ ಲೇವಡಿ!

ಕುಮಾರಸ್ವಾಮಿ ಮೇಲೆ ಮೋದಿ ಅನುಕಂಪದ ಮಾತು: ಹಿಂದಿನ ಮರ್ಮವೇನು?

loader