ವೈರಲ್ ಆಯ್ತು ಕತುವಾ, ಉನ್ನಾವ್ ಅತ್ಯಾಚಾರದ ಬಗ್ಗೆ ಮೋದಿ ಪ್ರತಿಕ್ರಿಯೆ ಸುದ್ದಿ!

news | Friday, April 13th, 2018
Suvarna Web Desk
Highlights

ಕತುವಾ, ಉನ್ನಾವ್ ಅತ್ಯಾಚಾರ:: ಪ್ರಧಾನಿ ‘ಮೌನ’ಕ್ಕೆ ಭಾರೀ ಟೀಕೆ! ಸೋಶಿಯಲ್ ಮೀಡಿಯಾದಲ್ಲಿ #SpeakUp ಟ್ರೆಂಡಿಂಗ್  

ನವದೆಹಲಿ: ಕತುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ವ್ಯಾಪಕ ಟೀಕೆಗೊಳಗಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕತುವಾ ಎಂಬಲ್ಲಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈಯಲಾಗಿದ್ದು, ಬಿಜೆಪಿ ಮುಖಂಡರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಉನ್ನಾವ್ ಎಂಬಲ್ಲಿ ಯುವತಿಯ ಮೇಲೆ ಬಿಜೆಪಿ ಶಾಸಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

ಆದರೆ ಈ ಬಗ್ಗೆ ಬಿಜೆಪಿ ನಾಯಕರು ಮೌನ ವಹಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಈವರೆಗೆ ಏನು ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ‘ದಿ ಕ್ವಿಂಟ್’ ಎಂಬ ಆಂಗ್ಲ ಸುದ್ದಿಜಾಲತಾಣ ವಿಶಿಷ್ಟವಾದ ರೀತಿಯಲ್ಲಿ ಟೀಕಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಕತುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿ ಈ ರೀತಿ ಹೇಳಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಲಾಗಿದ್ದು, ಅದನ್ನು ತೆರೆದಾಗ ಬರೇ ಪ್ರಧಾನಿ ಮೋದಿ ಫೋಟೋ ಹಾಕಲಾಗಿದ್ದು, ಪ್ರಧಾನಿ ಮೋದಿ ಮಾತನಾಡಿದ ಬಳಿಕ  ಸುದ್ದಿಯನ್ನು ಅಪ್ಡೇಟ್ ಮಾಡಲಾಗುವುದು ಎಂದು ಬರೆಯಲಾಗಿದೆ.

ಇನ್ನೊಂದೆಡೆ ಟ್ವಿಟರ್’ನಲ್ಲಿ ಪ್ರಧಾನಿ ಮೋದಿಯನ್ನುದ್ದೇಶಿಸಿ #SpeakUp ಟ್ರೆಂಡ್ ಆಗಿದೆ.   

Comments 0
Add Comment