Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ ಮತ್ತೊಂದು ಹೊಸ ಯೋಜನೆ

ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆಯೊಂದನ್ನು ಜಾರಿ ಮಾಡುತ್ತಿದ್ದಾರೆ.

PM Modi To Visit 20 States in 100 Days
Author
Bengaluru, First Published Jan 1, 2019, 8:14 AM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಪ್ರಯತ್ನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 100 ದಿನಗಳಲ್ಲಿ 20 ರಾಜ್ಯಗಳಿಗೆ ಭೇಟಿ ನೀಡಲು ಸಿದ್ಧತೆ ಆರಂಭಿಸಿದ್ದಾರೆ.

ಇದೇ ವೇಳೆ ಬಿಜೆಪಿ ‘ಮಿಷನ್ 123’ ಎಂಬ ಯೋಜನೆಯನ್ನು ಬಿರುಸಿನೊಂದಿಗೆ ಜಾರಿಗೆ ತರಲು ಉದ್ದೇಶಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ, ನರೇಂದ್ರ ಮೋದಿ ಅಲೆ ಇದ್ದ ಹೊರತಾಗಿಯೂ ಗೆಲ್ಲಲು ವಿಫಲವಾದ ಕ್ಷೇತ್ರಗಳಲ್ಲಿ ಈ ಬಾರಿ ಜಯ ಸಾಧಿಸುವುದೇ ‘ಮಿಷನ್ 123  ಯೋಜನೆಯ ಸಾರ.

ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಈ ಹಿಂದೆ ಗೆದ್ದಿದ್ದಷ್ಟು ಸ್ಥಾನಗಳನ್ನು ಗೆಲ್ಲಲು ಆಗುವುದಿಲ್ಲ ಎಂಬ ನಿಲುವಿಗೆ ಬಂದಿರುವ ಬಿಜೆಪಿ, ಹಿಂದೆ ಸೋತಿದ್ದ 123 ಕ್ಷೇತ್ರಗಳಿಗೆ ಹೆಚ್ಚು ಗಮನಹರಿಸಲು ಮುಂದಾಗಿದ್ದು, ಆ ಕ್ಷೇತ್ರಗಳನ್ನು ಈಗಾಗಲೇ ಗುರುತಿಸಿದೆ. ಅವನ್ನು 25 ಕ್ಲಸ್ಟರ್ ಗಳಾಗಿ ವಿಂಗಡಣೆ ಮಾಡಿದೆ. ಪ್ರತಿ ಕ್ಲಸ್ಟರ್‌ಗೂ ಒಬ್ಬೊಬ್ಬ ನಾಯಕನಿಗೆ ಹೊಣೆಗಾರಿಕೆ ಹಂಚಿಕೆ ಮಾಡಿದೆ. ಈ ಕ್ಲಸ್ಟರ್‌ಗಳು ಸೇರಿದಂತೆ 20 ರಾಜ್ಯಗಳಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಬಡಿದೆಬ್ಬಿಸಲು ಹಾಗೂ ಮತದಾರರ ಬೆಂಬಲ ಯಾಚಿಸಲು ಪ್ರಧಾನಿ ಮೋದಿ ಅವರು 100 ದಿನಗಳ ಕಾಲ ಪ್ರವಾಸಕ್ಕೆ ತೆರಳಲಿದ್ದಾರೆ. 

ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ (ಈ ರಾಜ್ಯಗಳಲ್ಲಿ ಒಟ್ಟು 77 ಕ್ಷೇತ್ರಗಳಿದ್ದು, ಕಳೆದ ಬಾರಿ ಬಿಜೆಪಿ 10 ರಲ್ಲಿ ಗೆದ್ದಿತ್ತು) ಕೂಡ ಈ ಕ್ಲಸ್ಟರ್ ವ್ಯಾಪ್ತಿಯಲ್ಲೇ ಬರುತ್ತವೆ. ಈಗಾಗಲೇ ಮೋದಿ ಅವರು ಡಿ. 24 ರಂದು ಒಡಿಶಾದಲ್ಲಿ ಐಐಟಿ ಉದ್ಘಾಟನೆ ವೇಳೆ ಒಂದು ಸಮಾವೇಶ ಮಾಡಿದ್ದಾರೆ. ಡಿ. 25 ರಂದು ಅಸ್ಸಾಂನ ಬೋಗಿಬೀಲ್ ಬ್ರಿಜ್ ಉದ್ಘಾಟನೆ ಸಂದರ್ಭವೂ ರ‌್ಯಾಲಿ ನಡೆಸಿದ್ದಾರೆ.

Follow Us:
Download App:
  • android
  • ios