ನವದೆಹಲಿ(ಫೆ.24): ಇಂದು ಪ್ರಧಾನಿ ನರೇಂದ್ರ ಮೋದಿ 2019ರ ಎರಡನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಡಿದರು.

ಮನ್ ಕಿ ಬಾತ್ ಆರಂಭದಲ್ಲೇ ಪುಲ್ವಾಮಾ ದಾಳಿ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತಾಂಬೆ ತನ್ನ 44 ವೀರ ಪುತ್ರರನ್ನು ಕಳೆದುಕೊಂಡಿದ್ದಾಳೆ ಎಂದು ಗದ್ಗದಿತರಾದರು.

ಪುಲ್ವಾಮಾ ದಾಳಿಯಿಂದಾಗಿ ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿದ್ದು, ತಾವು ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಶಕ್ತರಿರುವುದಾಗಿ ಮೋದಿ ಹೇಳಿದರು.

ಇನ್ನು ನಾಳೆ (ಫೆ.25) ನವದೆಹಲಿಯ ಅಮರ್ ಜವಾನ್ ಜ್ಯೋತಿ ಬಳಿ ಪ್ರಧಾನಿ ಮೋದಿ ದೇಶದ ಮೊದಲ ಯುದ್ಧ ಸ್ಮಾರಕ ಉದ್ಘಾಟಿಸುತ್ತಿದ್ದು,, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಯೋಧರು ಸದಾ ಸ್ಮರಣೀಯರು ಎಂದು ಪ್ರಧಾನಿ ಹೇಳಿದರು.

ಇದಕ್ಕೂ ಮೊದಲು ಮನ್ ಕಿ ಬಾತ್ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಇಂದು ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮವಿದ್ದು, ನಾನು ಹೇಳಿಲ್ಲ ಅಂತಾ ಮಾತ್ರ ಹೇಳ್ಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದು ವೈರಲ್ ಆಗಿದೆ.