ಗುಂಟೂರು(ಫೆ.10): ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಾಜಿ ಸಿಎಂ ಎನ್‌ಟಿ ರಾಮರಾವ್ ಅವರ ಬೆನ್ನಿಗೆ ಚೂರಿ ಹಾಕಿದವರು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

ಗುಂಟೂರಿನಲ್ಲಿ ಇಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಎನ್‌ಟಿಆರ್ ಆಂಧ್ರವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಟಿಡಿಪಿ ಸ್ಥಾಪಿಸಿದ್ದರು, ಆದರೆ ಅವರ ಅಳಿಯ ಚಂದ್ರಬಾಬು ನಾಯ್ಡು ಪದೇ ಪದೇ ಮೈತ್ರಿ ಬದಲಿಸುತ್ತಾ ಎನ್‌ಟಿಆರ್ ಅವರ ಕನಸನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದ ಅಭಿವೃದ್ಧಿಗೆ ನೀಡಿದ್ದ ಭರವಸೆಗಳ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಯೂಟರ್ನ್ ಹೊಡೆದಿದ್ದಾರೆ ಎಂದು ಆರೋಪಿಸಿದ ಮೋದಿ, ಮೈತ್ರಿ ಬದಲಾಯಿಸುವುದರಲ್ಲಿ ನಾಯ್ಡು ನಿಸ್ಸೀಮರು ಎಂದು ಕಿಚಾಯಿಸಿದರು.