Asianet Suvarna News Asianet Suvarna News

ವಿಧಿಯ ಕೈವಾಡ, ಈ ದಿನ ಎರಡು ಘಟನೆ ನಡೆಯಿತು, ಕೃಷಿ ಕಾಯ್ದೆ ವಾಪಸ್, ಎಬಿಡಿ ನಿವೃತ್ತಿ; ನ.19ರ ಟಾಪ್ 10 ಸುದ್ದಿ!

ದೇಶ ಹಾಗೂ ವಿಶ್ವದಲ್ಲಿ ಭಾರಿ ಸಂಚಲನ ಮೂಡಿಸಿದ ದಿನ ಇಂದು. ಭಾರತದಲ್ಲಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆ ವಾಪಸ್ ಪಡೆದರೆ, ಎಲ್ಲಾ ಮಾದರಿಯಿಂದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ನಿವೃತ್ತಿ ಹೇಳಿದ್ದಾರೆ. ಇತ್ತ ಆರ್ಟಿಕಲ್ 370 ಮರುಸ್ಥಾಪನೆ ಒತ್ತಡ ಕೇಳಿಬರುತ್ತಿದೆ. ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ, ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್ ಸೇರಿದಂತೆ ನವೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Pm modi repealed farm laws to ab de villiers retires top 10 News of November 19 ckm
Author
Bengaluru, First Published Nov 19, 2021, 7:02 PM IST
  • Facebook
  • Twitter
  • Whatsapp

Farm Laws Repeal: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ!

Pm modi repealed farm laws to ab de villiers retires top 10 News of November 19 ckm

ಕಳೆದೊಂದು ವರ್ಷದಿಂದ ಸತತ ಹೋರಾಟ, ವಿಪಕ್ಷಗಳ ಆಗ್ರಹ, ಪ್ರತಿಭಟನೆ, ಬಂದ್, ರ್ಯಾಲಿ ಸೇರಿ ಹಲವು ರೀತಿಯ ರೈತರ ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ದಿಢೀರ್ ಮೂರು ಕೃಷಿ ಮಸೂದೆಯನ್ನು(repeal of 3 farm laws) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ರೈತರಿಗೆ, ವಿಪಕ್ಷಗಳಿಗೆ ಸಂದ ಜಯ ಎಂದೇ ಬಿಂಬಿಸಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಜಮ್ಮು ಮತ್ತು ಕಾಶ್ಮೀರದಿಂದ ಮತ್ತೊಂದು ಕೂಗೂ ಎದ್ದಿದೆ. ರದ್ದು ಮಾಡಿರುವ ಆರ್ಟಿಕಲ್ 370(Article 370) ಸ್ಥಾನಮಾನ ಮರುಸ್ಥಾಪಿಸಲು ಆಗ್ರಹ ಹೆಚ್ಚಾಗಿದೆ.

ಸಾವರ್ಕರ್‌ ಮಾದರಿಯಲ್ಲಿ ಕ್ಷಮೆ ಕೇಳಿದ್ದಾರೆ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ಹೀಗಿತ್ತು ರಿಯಾಕ್ಷನ್!

Pm modi repealed farm laws to ab de villiers retires top 10 News of November 19 ckm

ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ನ.19) ವಿವಾದಿತ 3 ಕೃಷಿ ಕಾಯ್ದೆಗಳನ್ನ (Farm Laws) ವಾಪಸ್​ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

3 ಕೃಷಿ ಕಾಯ್ದೆ ವಾಪಸ್ ಪಡೆದ್ರೂ ಪ್ರತಿಭಟನೆ ನಿಲ್ಲಿಸಲು ಮೋದಿಗೆ 1 ಷರತ್ತು ಹಾಕಿದ ಟಿಕಾಯತ್

Pm modi repealed farm laws to ab de villiers retires top 10 News of November 19 ckm

 ಕೇಂದ್ರ ಸರ್ಕಾರದ 3 ಕೃಷಿ (Farms Law) ತಿದ್ದುಪಡಿ ಕಾಯ್ದೆಗೆ ರೈತರಿಂದ ಅಪಾರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ನವೆಂಬರ್ 19) ಬೆಳಗ್ಗೆ ಘೋಷಿಸಿದ್ದಾರೆ. 

Ab De Villiers Retires: ಕಳಚಿತು ಕ್ರಿಕೆಟ್ ಕೊಂಡಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಎಬಿಡಿ ಗುಡ್‌ ಬೈ..!

Pm modi repealed farm laws to ab de villiers retires top 10 News of November 19 ckm

ಕ್ರಿಕೆಟ್ ವಲಯದ ಅತಿದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಮಿಸ್ಟರ್ 360 ಖ್ಯಾತಿಯ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ (Ab De Villiers) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ (Retirement) ಘೋಷಿಸಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ಜಗತ್ತಿನ ಸೂಪರ್ ಸ್ಟಾರ್ ಕ್ರಿಕೆಟಿಗನ ಯುಗಾಂತ್ಯವಾಗಿದೆ. 

Wedding Bell: ಸುಶಾಂತ್‌ ಸಿಂಗ್‌ ಮಾಜಿ ಗರ್ಲ್‌ಫ್ರೆಂಡ್‌ ಬ್ಯಾಚಿಲ್ಲೋರೆಟ್ ಪಾರ್ಟಿ ಫೋಟೋ ವೈರಲ್‌!

Pm modi repealed farm laws to ab de villiers retires top 10 News of November 19 ckm

ಜನಪ್ರಿಯ ಟಿವಿ ಧಾರಾವಾಹಿ 'ಪವಿತ್ರ ರಿಶ್ತಾ' (Pavitra Rishta) ನಟಿ ಅಂಕಿತಾ ಲೋಖಂಡೆ  (Ankita Lokhande) ಗೆಳೆಯ ವಿಕ್ಕಿ ಜೈನ್ (Vicky Jain) ಅವರನ್ನು ವರಿಸಲಿದ್ದಾರೆ. 

BTS-2021| ನಾನು ಕರ್ನಾಟಕದ ಹೆಮ್ಮೆಯ ಪುತ್ರಿ: Apple ಉಪಾಧ್ಯಕ್ಷೆ ಪ್ರಿಯಾ

Pm modi repealed farm laws to ab de villiers retires top 10 News of November 19 ckm

ಉನ್ನತ ಶಿಕ್ಷಣ ಕ್ಷೇತ್ರದ ಗುಣಾತ್ಮಕ ಸುಧಾರಣೆಗೆ ಹತ್ತಾರು ಉಪಕ್ರಮಗಳನ್ನು ತಂದಿರುವ ಕರ್ನಾಟಕ ರಾಜ್ಯ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ ಎಂದು ಆ್ಯಪಲ್‌ ಕಂಪನಿ ಉಪಾಧ್ಯಕ್ಷೆ, ಬೆಂಗಳೂರು ಮೂಲದ ಪ್ರಿಯಾ ಬಾಲಸುಬ್ರಮಣ್ಯಂ(Priya Balasubramaniam) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Bengaluru Tech Summit| ಟೆಕ್‌ ಶೃಂಗದಲ್ಲಿ 5,000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ

Pm modi repealed farm laws to ab de villiers retires top 10 News of November 19 ckm

ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗ ಯಶಸ್ವಿ ಎರಡು ದಿನ ಪೂರೈಸಿದ್ದು ಮಹತ್ವದ ವಿಚಾರಗೋಷ್ಠಿಗಳು ಹಾಗೂ ‘ಸ್ಮಾರ್ಟ್‌ ಬಯೋ ಪುರಸ್ಕಾರ’, ‘ಬೆಂಗಳೂರು ಇಂಪ್ಯಾಕ್ಟ್’ ಪ್ರದಾನದ ನಡುವೆ 5 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಆಕರ್ಷಿಸಲು ಯಶಸ್ವಿಯಾಗಿದೆ.

Motorbike: ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು?

Pm modi repealed farm laws to ab de villiers retires top 10 News of November 19 ckm

ದೇಶದ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರಸೈಕಲ್ ಇಂಡಿಯಾ (Suzuki Motorcycle India),  ಅವೆನಿಸ್ 125 (Suzuki Avenis 125) ಎಂಬ ಹೊಸ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್‌ಗೆ ಬುಕ್ಕಿಂಗ್ ಆರಂಭವಾಗಿದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿರುವ ಸ್ಕೂಟರ್ ಸ್ಪೂರ್ಟಿ ಲುಕ್ ಹೊಂದಿರುವ ಕಾರಣ ಹೆಚ್ಚು ಅತ್ಯಾಕರ್ಷಕವಾಗಿದೆ.

IND vs NZ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ತಂಡದಲ್ಲಿ 1 ಮಹತ್ವದ ಬದಲಾವಣೆ!

Pm modi repealed farm laws to ab de villiers retires top 10 News of November 19 ckm

 ಭಾರತ(Team India) ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ20 ಪಂದ್ಯಕ್ಕೆ ರಾಂಚಿ(Ranchi) ಕ್ರೀಡಾಂಗಣ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ  ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ

Follow Us:
Download App:
  • android
  • ios