ಯುಪಿಎ ಅವಧಿಯಲ್ಲಿ ರಕ್ಷಣಾ ನೀತಿಗೆ ಗರ ಬಡಿದಿತ್ತು: ಮೋದಿ

First Published 13, Apr 2018, 8:04 AM IST
PM Modi inaugurates defense expo in Tamilnadu
Highlights

ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಕ್ಷೇತ್ರದ ಯೋಜನೆಗಳು ಪಾಶ್ರ್ವವಾಯುವಿಗೆ ತುತ್ತಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ

ತಿರುವಿದಾಂತೈ (ತಮಿಳುನಾಡು): ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಕ್ಷೇತ್ರದ ಯೋಜನೆಗಳು ಪಾಶ್ರ್ವವಾಯುವಿಗೆ ತುತ್ತಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.

ಇಲ್ಲಿ ನಾಲ್ಕು ದಿನಗಳ ಡಿಫೆನ್ಸ್‌ ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ಮೋದಿ, ಹಿಂದಿನ ಯುಪಿಎ ಸರ್ಕಾರದಲ್ಲಿ ಆಳಸಿತನ, ಅಸಮರ್ಥತೆ ಮತ್ತು ಕೆಲವು ಕೆಲವು ಗುಪ್ತ ಕಾರ್ಯಸೂಚಿಗಳಿಂದಾಗಿ ರಕ್ಷಣಾ ವಲಯದ ಮೇಲೆ ಭಾರೀ ಹೊಡೆತ ನೀಡಿದೆ. ರಕ್ಷಣಾ ವಲಯದ ನಿಷ್ಕಿ್ರಯತೆಯಿಂದಾಗಿ ದೇಶದ ರಕ್ಷಣಾ ಸಿದ್ಧತೆಗೆ ಹಿನ್ನಡೆಯಾಗಿದೆ. ಆದರೆ, ರಕ್ಷಣಾ ಕೈಗಾರಿಕೆಗಳ ಜೊತೆ ಪಾಲುದಾರಿಕೆಯನ್ನು ನಿರ್ಮಿಸುವ ಎನ್‌ಡಿಎ ಸರ್ಕಾರದ ಯತ್ನ ಸಮಗ್ರತೆ ಮತ್ತು ಪ್ರಾಮಾಣಿಕತೆಯ ಉನ್ನತ ಆದರ್ಶಗಳಿಂದ ನಿರ್ದೇಶಿಸಲ್ಪಟ್ಟಿದೆ ಎಂದು ಹೇಳಿದರು.

ಇದೇ ವೇಳೆ 126 ಮೀಡಿಯಂ ಮಲ್ಟಿರೋಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಯುಪಿಎ ಅವಧಿಯಲ್ಲಿ ಪೂರ್ಣಗೊಳಿಸದೇ ಇರುವುದನ್ನು ಮೋದಿ ಉಲ್ಲೇಖಿಸಿದ ಮೋದಿ, ತಮ್ಮ ಸರ್ಕಾರ 110 ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರ ಕೈಗೊಳ್ಳಲು ದಶಕಗಳ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ವಿದೇಶಿ ಕಂಪನಿಗಳಿಗೆ ಭರವಸೆ ನೀಡಿದರು. ಅಲ್ಲದೇ ತಮ್ಮ ಸರ್ಕಾರ ರಕ್ಷಣಾ ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ತಮಿಳುನಾಡು, ಉತ್ತರ ಪ್ರದೇಶಗಳಲ್ಲಿ ರಕ್ಷಣಾ ಕೈಗಾರಿಕೆ ಕಾರಿಡಾರ್‌ಗಳನ್ನು ನಿರ್ಮಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

loader