Asianet Suvarna News Asianet Suvarna News

ಮತ್ತೆ ಮೋದಿ ಬಂದ್ರೆ ಏನಾಗುತ್ತೆ?: @75 ನನಸಾಗುತ್ತೆ!

2019ರಲ್ಲೂ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗ್ತಾರಾ?| ಮೋದಿ ಮತ್ತೆ ಪ್ರಧಾನಿಯಾದರೆ ಏನೆಲ್ಲಾ ಯೋಜನೆಗಳು ಅನುಷ್ಠಾನಕ್ಕೆ?| 2022ಕ್ಕೆ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ| 2022ಕ್ಕೆ ಪ್ರಧಾನಿ ಮೋದಿ ಏನೆಲ್ಲಾ ಯೋಜನೆಗಳನ್ನು ಘೋಷಿಸಲಿದ್ದಾರೆ?| 'ನವ ಭಾರತ @75ಕ್ಕೆ ಸ್ಟ್ರಾಟಜಿ' ಯಶಸ್ಸಿಗೆ ಮೋದಿ ಪ್ರಧಾನಿಯಾಗುವುದು ಅವಶ್ಯ

PM Modi Has Plans for New India in 2022
Author
Bengaluru, First Published Dec 21, 2018, 12:20 PM IST

ನವದೆಹಲಿ(ಡಿ.21): 2019 ರ ಲೋಕಸಭೆ ಚುನಾವಣೆಗೆ ಇನ್ನೇನು ದಿನಗಳ ಎಣಿಕೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ತಯಾರಿ ನಡೆಸಿದೆ.

ಇತ್ತ ಕಾಂಗ್ರೆಸ್ ಕೂಡ ಮಹಾಮೈತ್ರಿಯೊಂದಿಗೆ ಯುದ್ಧ ರಂಗಕ್ಕಿಳಿದು 2019ನ್ನು ಗೆಲ್ಲುವ ಕನಸು ಕಾಣುತ್ತಿದೆ. ಈ ಮಧ್ಯೆ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾದರೆ ಏನಾಗಲಿದೆ ಎಂಬ ಚರ್ಚೆಯೊಂದು ಇದೀಗ ಶುರುವಾಗಿದೆ.

ಎಲ್ಲರಿಗೂ ಗೊತ್ತಿರುವಂತೆ 2022 ರಲ್ಲಿ ಭಾರತ ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯನ್ನು ಕಳಚಿ 2022ಕ್ಕೆ ಬರೋಬ್ಬರಿ 75 ವರ್ಷಗಳಾಗುತ್ತವೆ.

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಪಟ್ಟಿ ಮಾಡಿಟ್ಟಿದೆ. ದೇಶದ ಜನರ ಜೀವನದ ಗತಿ ಬದಲಿಸಬಲ್ಲ ಈ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲು ಮೋದಿ ಮತ್ತೆ ಪ್ರಧಾನಿಯಾಗುವುದು ಅವಶ್ಯಕ ಎಂಬ ಮಾತುಗಳು ಕೇಳಿ ಬರುತ್ತಿವೆ.

 

ಅದರಂತೆ ಕೇಂದ್ರ ಸರ್ಕಾರ 2022ಕ್ಕೆ ಸಿದ್ಧಪಡಿಸಿರುವ ಯೋಜನೆಗಳತ್ತ ಗಮನ ಹರಿಸುವುದಾದರೆ...

1. ದೇಶದ ಪ್ರತಿಯೊಂದು ಕುಟುಂಬಕ್ಕೆ ಪಕ್ಕಾ ಗೃಹಗಳ ನಿರ್ಮಾಣ

2. ದೇಶದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

3. ದೇಶದ ಎಲ್ಲಾ ಮನೆಗಳಿಗೂ ಶೌಚಗೃಹ ನಿರ್ಮಾಣ

4. ದೇಶದ ಎಲ್ಲಾ ಮನೆಗಳಿಗೆ 24 ಗಂಟೆ ವಿದ್ಯುತ್ ಸಂಪರ್ಕ

5. ಸಮುದ್ರ ಮತ್ತು ಒಳನಾಡಿನ ಜಲಮಾರ್ಗಗಳ ಬಳಕೆ ದ್ವಿಗುಣ

6. ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಉದ್ದ ಹೆಚ್ಚಿಸುವಿಕೆ

7. ಭಾರತೀಯ ರೈಲ್ವೇಯನ್ನು ಸ್ವತಂತ್ರ ನಿಯಂತ್ರಕವನ್ನಾಗಿ ಘೋಷಿಸುವುದು

ಇದಿಷ್ಟೇ ಅಲ್ಲದೇ ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 4 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಬ್ಲೂಪ್ರಿಂಟ್ ಅನ್ನು ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಇದನ್ನು 'ನವ ಭಾರತ @75ಕ್ಕೆ ಸ್ಟ್ರಾಟಜಿ' ಎಂದು ಬಿಂಬಿಸಲಾಗಿದೆ.

2018-23ರ ನಡುವೆ ಸರಾಸರಿ 8% ಜಿಡಿಪಿ ಬೆಳವಣಿಗೆಯ ಗುರಿ ಹೊಂದಲಾಗಿದೆ. ಇದರಿಂದ ಪ್ರಸಕ್ತ 2.7 ಲಕ್ಷ ಕೋಟಿ ಡಾಲರ್‌ ಇರುವ ಭಾರತದ ಆರ್ಥಿಕತೆಯು 2022-23ಕ್ಕೆ 4 ಲಕ್ಷ ಕೋಟಿ ಡಾಲರ್‌ ಆಗಲಿದೆ.

Follow Us:
Download App:
  • android
  • ios