ಅತ್ಯಾಚಾರ ಪ್ರಕರಣಗಳು: ಕೊನೆಗೂ ಮಾತನಾಡಿದ ಪ್ರಧಾನಿ ಮೋದಿ

First Published 13, Apr 2018, 10:01 PM IST
PM Modi Finally Breaks Silence Over Rape Cases
Highlights

ದೇಶದ್ಯಾಂತ ಭಾರೀ ಸದ್ದು ಮಾಡುತ್ತಿರುವ ಕತುವಾ, ಉನ್ನಾವ್ ಅತ್ಯಾಚಾರ ಪ್ರಕರಣಗಳು

ಟೀಕೆಗೊಳಗಾಗಿದ್ದ ಪ್ರಧಾನಿ ಮೋದಿ ಮೌನ

ನವದೆಹಲಿ: ಕೆಲದಿನಗಳಿಂದ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊನೆಗೂ ಪ್ರಧಾನಿ ಮೋದಿ ಮೌನ ಮುರಿದಿದ್ದಾರೆ.

ಇಂದು ಮಾಡಿದ ಭಾಷಣವೊಂದರಲ್ಲಿ, ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳ ಬಗ್ಗೆ ನೇರವಾಗಿ ಉಲ್ಲೇಖಿಸದಿದ್ದರೂ, ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಿರುವ ವಿಷಯಗಳು ನಾಗರೀಕ ಸಮಾಜಕ್ಕೆ ತಕ್ಕುದ್ದಲ್ಲ. ಇಂತಹ ಘಟನೆಗಳು ಸಮಾಜಕ್ಕೆ, ದೇಶಕ್ಕೆ ನಾಚಿಕೆಗೇಡಿನ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಮ್ಮ ಮಗಳ ಜೊತೆ ಈ ರೀತಿ ಬರ್ಬರವಾಗಿ ವರ್ತಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕತುವಾ ಎಂಬಲ್ಲಿ 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈಯಲಾಗಿದ್ದು, ಬಿಜೆಪಿ ಮುಖಂಡರು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಉತ್ತರ ಪ್ರದೇಶದಲ್ಲಿ ಉನ್ನಾವ್ ಎಂಬಲ್ಲಿ ಯುವತಿಯ ಮೇಲೆ ಬಿಜೆಪಿ ಶಾಸಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

ಕತುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರುವುದು ವ್ಯಾಪಕ ಟೀಕೆಗೊಳಗಾಗಿತ್ತು.

loader