Asianet Suvarna News

ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್, ಚೀನಾ ಕೊರೋನಾ ಲಸಿಕೆ ಠುಸ್; ಜೂ.24ರ ಟಾಪ್ 10 ಸುದ್ದಿ!

ಜಮ್ಮು ಮತ್ತು ಕಾಶ್ಮೀರ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಗಣೇಶ ಹಬ್ಬಕ್ಕೆ ಜಿಯೋ ಹಾಗೂ ಗೂಗಲ್ ಅಭಿವೃದ್ಧಿ ಪಡಿಸಿದ ಸ್ಮಾಾರ್ಟ್ ಫೋನ್ ಬಿಡುಗಡೆಯಾಗುತ್ತಿದೆ. ಚೀನಾದ ಕೊರೋನಾ ಲಸಿಕೆ ಕಳಪೆ ಅನ್ನೋ ಮಾತುಗಳು ಕೇಳಿಬಂದಿದೆ. ಕೂ ಸೇರಿಕೊಂಡ ಅನುಷ್ಕಾ ಶೆಟ್ಟಿ, ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ ಸೇರಿದಂತೆ ಜೂನ್ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

PM Modi All party meeting to China vaccine top 10 News of June 24 ckm
Author
Bengaluru, First Published Jun 24, 2021, 5:39 PM IST
  • Facebook
  • Twitter
  • Whatsapp

ಜಮ್ಮು ಕಾಶ್ಮೀರ ಸರ್ವಪಕ್ಷ ಜೊತೆ ಪ್ರಧಾನಿ ಮೋದಿ ಸಭೆ ; ಕಣಿವೆ ರಾಜ್ಯದಲ್ಲಿ ಬಿಗಿ ಬಂದೋಬಸ್ತ್!...


 ಜಮ್ಮು ಕಾಶ್ಮೀರಕ್ಕಿದ್ದ ಆರ್ಟಿಕಲ್ 370 ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಇದೀಗ ಮತ್ತೊಂದು ಮಹತ್ವದ ಬೆಳಣಿಗೆ ಆರಂಭಗೊಂಡಿದೆ. ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಮೊದಲ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ಸಭೆ ನಡೆಸಿದ್ದಾರೆ. ಈ ಮಹತ್ವದ ಸಭೆ ಆರಂಭಗೊಂಡಿದೆ.

ಪ್ಲೇ ಬಾಯ್ ಕೆಲಸದ ಮೋಹದಲ್ಲಿ ಇದ್ದದ್ದೂ ಹೋಯ್ತು!...

ಶ್ರೀಮಂತ ಮಹಿಳೆಯರೊಂದಿಗೆ ಸುಖ ಪಡೆಯಿರಿ, ಅದಕ್ಕಾಗಿ ಹಣವನ್ನೂ ಪಡೆಯಿರಿ- ಎಂಬ ಆಫರ್‌ಗೆ ಮರುಳಾದ ಯುವಕರ ಕತೆ ಏನಾಯ್ತು ಗೊತ್ತಾ? 

ಮುಂಬೈ ಉಗ್ರ ದಾಳಿಯ ಸೂತ್ರಧಾರ ಹಫೀಜ್‌ ಸಯೀದ್‌ ಮನೆ ಬಳಿ ಬಾಂಬ್ ಸ್ಫೋಟಕ್ಕೆ ಟ್ವಿಸ್ಟ್...

ಮುಂಬೈ ಉಗ್ರ ದಾಳಿಯ ಪ್ರಮುಖ ಸೂತ್ರಧಾರಿ ಹಾಗೂ ನಿಷೇಧಿತ ಜಮಾತ್‌ ಉದ್‌ ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಮನೆಯ ಬಳಿ ಪ್ರಬಲ ಕಾರು ಬಾಂಬ್‌ ಸ್ಫೋಟದಲ್ಲಿ 3 ಜನರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೀನಾ ಲಸಿ​ಕೆ ಪಡೆದ ದೇಶ​ಗ​ಳ​ಲ್ಲಿ ಮತ್ತೆ ಕೊರೋನಾ ಏರಿಕೆ..! ಡ್ರ್ಯಾಗನ್ ಲಸಿಕೆ ಠುಸ್...

ವಿಶ್ವಕ್ಕೆಲ್ಲಾ ಕೊರೋನಾ ಹಬ್ಬಿಸಿದ ಕಳಂಕ ಹೊತ್ತಿರುವ ಚೀನಾ ದೇಶ, ಇದೀಗ ವೈರಸ್‌ ವಿರುದ್ಧ ಕಳಪೆ ಗುಣಮಟ್ಟದ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟುಟೀಕೆಗೆ ಗುರಿಯಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಚೀನಾ ಲಸಿಕೆಯನ್ನು ನೀಡಿದ್ದ ಹಲವು ದೇಶಗಳಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ದಾಖಲಾಗುತ್ತಿದೆ ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ ವರದಿ ಮಾಡಿದೆ.

ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಜಿಲೆಂಡ್‌; ವಿಲಿಯಮ್ಸನ್‌ ಪಡೆಗೆ ಜೈ ಹೋ ಎಂದ ನೆಟ್ಟಿಗರು...

ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ದದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಟೆಸ್ಟ್ ವಿಶ್ವಕಪ್‌ ನ್ಯೂಜಿಲೆಂಡ್ ಪಾಲಾಗಿದೆ.

ಕಂಗನಾ ರಣಾವತ್ ಹಾದಿ ಹಿಡಿದ ಅನುಷ್ಕಾ ಶೆಟ್ಟಿ; 'Koo'ನಲ್ಲಿ ಕಾರುಬಾರು ಶುರು!...

ಟ್ಟಿಟರ್‌ ನಂತರ ಕೂ ಸೇರಿಕೊಂಡ ನಟಿ ಅನುಷ್ಕಾ ಶೆಟ್ಟಿ. ಬಾಲಿವುಡ್ 'ಕ್ವೀನ್'ನ ಫಾಲೋ ಮಾಡುತ್ತಿದ್ದಾರಾ ಬಾಹುಬಲಿ ನಟಿ?

ಗಣೇಶ ಹಬ್ಬಕ್ಕೆ ಜಿಯೋ ಕೂಡುಗೆ ; ಗೂಗಲ್-ಜಿಯೋ ಅಭಿವೃದ್ಧಿಪಡಿಸಿದ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ!...

ಈ ಬಾರಿಯ ಗಣೇಶ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ನೀಡುತ್ತಿದೆ. ಹೌದು, ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್ 10(ಗಣೇಶ ಹಬ್ಬ)ಕ್ಕೆ ಜಿಯೋ ಅಗ್ಗದ ದರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ.

7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್‌ ಜೀ ವಿಶ್ವ ನಂ.1...

ವಿಶ್ವದ ಅತಿದೊಡ್ಡ ದಾನಿಗಳ ಪಟ್ಟಿಬಂದಾಗಲೆಲ್ಲಾ ಕೆಲ ವಿದೇಶಿ ಎನ್‌ಜಿಒಗಳು ಮತ್ತು ಉದ್ಯಮಿಗಳು ಹೆಸರು ಕೇಳಿಬರುವುದೇ ಹೆಚ್ಚು. ಆದರೆ ಹುರೂನ್‌ ಮತ್ತು ಎಡೆಲ್‌ಗೀವ್‌ ಫೌಂಡೇಷನ್‌ ಸಿದ್ಧಪಡಿಸಿರುವ ಶತಮಾನದ ಅತಿದೊಡ್ಡ ದಾನಿಗಳ ಪೈಕಿ, ಟಾಟಾ ಸಮೂಹದ ಸಂಸ್ಥಾಪಕರಾದ ಜೆಮ್‌ಶೆಡ್‌ ಜೀ ಟಾಟಾ ವಿಶ್ವದಲ್ಲೇ ನಂ.1 ಆಗಿ ಹೊರಹೊಮ್ಮಿದ್ದಾರೆ.

ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ: 15 ದಿನದಲ್ಲಿ 3ನೇ ಸಲ ಸಮಾಲೋಚನೆ...

2024ರಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ದೃಷ್ಟಿಯಿಂದ 8 ವಿಪಕ್ಷಗಳ ನಾಯಕರು ಚರ್ಚೆ ನಡೆಸಿದ ಬೆನ್ನಲ್ಲೇ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಬುಧವಾರ ಮತ್ತೊಮ್ಮೆ ಎನ್‌ಸಿಪಿ ಪರಮೋಚ್ಚ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿಯಾಗಿದ್ದಾರೆ.
 

Follow Us:
Download App:
  • android
  • ios