ಸಭೆಗೆ ಬಾರದೆ 2ನೇ ಅಲೆಗೆ ಕೇಂದ್ರವೇ ಕಾರಣ ಅನ್ನುವರಿಗೆ ಬಿಜೆಪಿ ದಾಖಲೆ ಉತ್ತರ...

 ಕೊರೋನಾ ಎರಡನೇ ಅಲೆ ದೇಶದ ನಾಗರಿಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಹಲವಾರು ಕಡೆಯಿಂದ ಕೇಂದ್ರ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗಿವೆ. ವಿರೋಧ ಪಕ್ಷಗಳು ಎರಡನೇ ಅಲೆ ಹೆಚ್ಚಾಗಲು ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದೆ.

ಲವ್ ಯೂ ಝಿಂದಗಿ ಎಂದು ಸ್ಫೂರ್ತಿಯಾದವಳನ್ನು ಕೊನೆಗೂ ಬಿಡಲಿಲ್ಲ ಕೊರೋನಾ...

ಇತ್ತೀಚೆಗೆ ಕೊರೋನಾ ಸೋಂಕಿತ ಯುವತಿಯೊಬ್ಬಳು ಲವ್ ಯೂ ಝಿಂದಗೀ ಹಾಡು ಕೇಳುತ್ತಾ ನಾನು ಮತ್ತೆ ಬದುಕಿಗೆ ಮರಳುತ್ತೇನೆ ಎಂದು ಧೈರ್ಯವಾಗಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಹೆಚ್ಚಾಗಿ ಕೊರೋನಾ ಜೊತೆ ಹೋರಾಡುತ್ತಿರುವವರಿಗೆ ಸ್ಫೂರ್ಥಿಯಾಗಿತ್ತು. ಆದರೆ ಕೊರೋನಾ ಕ್ರೂರತೆ ಮಾತ್ರ ಈಕೆಯನ್ನು ಬದುಕಲು ಬಿಟ್ಟಿಲ್ಲ.

ಸಂಕಷ್ಟದಲ್ಲಿ ರೈತರ ಕೈಹಿಡಿದ PM ಕಿಸಾನ್; 8ನೇ ಕಂತಿನ 20 ಸಾವಿರ ಕೋಟಿ ರೂ ಬಿಡುಗಡೆ!...

ಅಕ್ಷಯ ತೃತೀಯ ದಿನ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಗುಡ್ ನ್ಯೂಸ್ ನೀಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿ ರೈತರಿಗೆ 20,000 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಇದು 8ನೇ ಕಂತಿನ ಹಣವಾಗಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಕೊಂಚ ಸಮಾಧಾನ ತಂದಿದೆ.

ರಷ್ಯಾ ಲಸಿಕೆ ಸ್ಪುಟ್ನಿಕ್‌ V ಒಂದು ಡೋಸ್‌ಗೆ ಭಾರತದಲ್ಲಿ 995 ರೂ....

ರಷ್ಯಾದ ಕೊರೋನಾ ಲಸಿಕೆ ಸ್ಪಟ್ನಿಕ್ ವಿ ಮೊದಲ ಡೋಸ್‌ನ್ನು ಹೈದರಾಬದ್‌ನಲ್ಲಿ ನೀಡಲಾಗಿದೆ. ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಲಾಂಚ್ ಮಾಡಲಾಗಿದ್ದು ಲಸಿಕೆಯ ಮೊದಲ ಡೋಸ್ ಹೈದರಾಬಾದ್‌ನಲ್ಲಿ ನೀಡಲಾಗಿದೆ ಎಂದು ಡ್ರಗ್ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ತಿಳಿಸಿದೆ.

ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!...

ಇದೀಗ 7 ದಿನಗಳ ಅಂತರದಲ್ಲಿ ವಿರುಷ್ಕಾ ಜೋಡಿ ಬರೋಬ್ಬರಿ 11 ಕೋಟಿ 39 ಲಕ್ಷದ 11 ಸಾವಿರದ 820 ರುಪಾಯಿ(11,39,11,820 ರುಪಾಯಿ)  ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿರುಷ್ಕಾ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸನ್ನಿಗೆ 40 ವರ್ಷ: ಪತ್ನಿಯ ಚಂದದ ಬಾಲ್ಯದ ಫೋಟೋ ಶೇರ್ ಮಾಡಿದ ಡೇನಿಯಲ್...

ಮೇ 13 ರಂದು ಸನ್ನಿ ಲಿಯೋನ್ 40 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಪತಿ ಡೇನಿಯಲ್ ವೆಬರ್ ಇನ್‌ಸ್ಟಾಗ್ರಾಮ್‌ನಲ್ಲಿ ನಟಿಯ ಕೊಲಾಜ್ ಶೇರ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಸನ್ನಿ ಅವರ ಬಾಲ್ಯದ ಫೋಟೋ ಇದೆ.

5ಜಿ ಸೇವೆ ದೊರತೆರೆ ಎಷ್ಟು ಕೋಟಿ ಜನರು ಇಂಟರ್ನೆಟ್ ಸಂಪರ್ಕ ಪಡೆಯಬಹುದು?...

ಈಗಾಗಲೇ ಹಲವು ರಾಷ್ಟ್ರಗಳಲ್ಲಿ 5ಜಿ ಸೇವೆ ಆರಂಭವಾಗಿದೆ. ಆದರೆ, ಭಾರತದಲ್ಲಿ ಇನ್ನೂ 5ಜಿ ಸೇವೆ ದೊರೆಯುತ್ತಿಲ್ಲ. ಈಗ ಆರು ತಿಂಗಳ ಕಾಲು ಪ್ರಯೋಗಕ್ಕೆ ಅವಕಾಶ ನೀಡಲಾಗಿದೆ. ಒಂದೊಮ್ಮೆ ಸಂಪೂರ್ಣವಾಗಿ ಬಳಕೆಗೆ 5ಜಿ ಸೇವೆ ದೊರತರೆ, ಭಾರತದಲ್ಲಿ ಮೊದಲ ವರ್ಷದಲ್ಲೇ ಕನಿಷ್ಠ 40 ಮಿಲಿಯನ್ ಅಂದರೆ 4 ಕೋಟಿ ಜನರು ಸಂಪರ್ಕ ಪಡೆಯಲಿದ್ದಾರೆಂದು ವರದಿಯೊಂದು ತಿಳಿಸಿದೆ.

ಒಂದು ವಾರದಲ್ಲಿ 4 ಬಾರಿ ದರ ಏರಿಕೆ; ಪೆಟ್ರೋಲ್-ಡೀಸೆಲ್ ಸಾರ್ವಕಾಲಿಕ ಗರಿಷ್ಠ ಬೆಲೆ !...

ಒಂದೆಡೆಯಿಂದ ಕೊರೋನಾ ಜನರ ಜೀವವನ್ನು ಹಿಂಡುತ್ತಿದೆ, ಮತ್ತೊಂದಡೆ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಇದೀಗ ಒಂದೇ ವಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ 4ನೇ ಬಾರಿಗೆ ಏರಿಕೆಯಾಗಿದೆ. ಈ ಮೂಲಕ ಗರಿಷ್ಠ ದರ ಏರಿಕೆಯಾಗಿದೆ. ಇಂದಿನ ದರ ಇಲ್ಲಿದೆ.

200 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಭಾರತಕ್ಕೆ ತಂದ ಪೈಲಟ್‌ಗೆ ಯುಕೆ ಪ್ರಧಾನಿ ಗೌರವ...

ಪೈಲಟ್ ಮತ್ತು ಖಲ್ಸಾ ಏಡ್ ಸ್ವಯಂಸೇವಕ ಯುಕೆ ಮೂಲದ ಜಸ್ಪಾಲ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಅಮೆರಿಕದಲ್ಲಿ 12-15 ವರ್ಷದ ಮಕ್ಕಳಿಗೆ ಸಾಮೂಹಿಕ ಲಸಿಕೆ ಅಭಿಯಾನ...

ಮಕ್ಕಳಿಗಾಗಿ ವಿಶ್ವದ ದೊಡ್ಡ ಸಾಮೂಹಿಕ ಲಸಿಕಾ ಅಭಿಯಾನ ಅಮೆರಿಕದಲ್ಲಿ ಆರಂಭವಾಗಿದೆ. 12-15 ವರ್ಷದ ಮಕ್ಕಳಿಗೆ ಫೈಝರ್ ಬಯೋಟೆಕ್ ಲಸಿಕೆ ನೀಡಲಾಗುತ್ತಿದೆ. ವಿಶ್ವದ ಮೊದಲ ಸಾಮೂಹಿಕ ಕೊರೊನಾವೈರಸ್ ಇನಾಕ್ಯುಲೇಷನ್ ಅಭಿಯಾನವನ್ನು ಗುರುವಾರ ಆರಂಭಿಸಲಾಗಿದೆ.