ಶ್ರೀನಗರ(ಅ.25): ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆದಿದ್ದು, ಶೇ.100ರಷ್ಟು ಮತದಾನವಾಗುವ ಮೂಲಕ ದಾಖಲೆ ಬರೆದಿದೆ.

"

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

ಕಣಿವೆಯ ಸ್ಥಳೀಯ ಸಂಸ್ಥೆ(ಬ್ಲಾಕ್ ಡವಲೆಪ್'ಮೆಂಟ್ ಕೌನ್ಸಿಲ್‌)ಗಳಿಗೆ ಚುನಾವಣೆ ನಡೆದಿದ್ದು, ಇದೇ ಮೊದಲ ಬಾರಿಗೆ ಹಿಂಸಾಚಾರ ರಹಿತ ಮತದಾನಕ್ಕೆ ಸಾಕ್ಷಿಯಾಗಿದೆ.

ಕಾಶ್ಮೀರ ವಿಷಯ ಮಾತಾಡಿಲ್ಲ: ಮೋದಿ ಮುಂದೆ ಕ್ಸಿ ಕೆಮ್ಮಂಗಿಲ್ಲ!

ಅಲ್ಲದೇ ಇದೇ ಮೊದಲ ಬಾರಿಗೆ ಕಣಿವೆಯಲ್ಲಿ ಬಿಡಿಸಿ ಗೆ ಚುನಾವಣೆ ನಡೆದಿದ್ದು, ಒಟ್ಟು 310 ಕ್ಷೇತ್ರಗಳಿಗೆ ಒಟ್ಟು 1,065 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇನದನು ಬಿಡಿಸಿಗೆ ಕೇವಲ ಗ್ರಾಮ ಪಂಚಾಯ್ತಿಯ ಪಂಚರು ಹಾಗೂ ಸರಪಂಚರು ಮಾತ್ರ ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಇದೊಂದು ಐತಿಹಾಸಿಕ ಚುನಾವಣೆ ಎಂದು ಈ ಪ್ರಮುಖರು ಬಣ್ಣಿಸಿದ್ದಾರೆ.

ಆದರೆ ಬಿಡಿಸಿ ಚುನಾವಣೆಯನ್ನು ಪ್ರತಿಪಕ್ಷ ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮೊಕ್ರೆಟಿಕ್ ಪಾರ್ಟಿ ಹಾಗೂ ಸಿಪಿಎಂ ಬಹಿಷ್ಕರಿಸಿದ್ದವು. ಅಲ್ಲದೇ ಮಹಿಳೆಯರಿಗಾಗಿ ಮೀಸಲಿರುವ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳು ಇಲ್ಲದ ಕಾರಣ ಆ ಕ್ಷೇತ್ರಗಳಿಗೆ ಚುನಾವಣೆ ನಡೆದಿಲ್ಲ.

ಕಣಿವೆಗೆ ಮತ್ತೆ ರಾಜ್ಯದ ಸ್ಥಾನಮಾನ: ಭರವಸೆ ಕೊಟ್ಟ 'ಮನೆ' ಯಜಮಾನ!

ಇನ್ನು ಬಿಡಿಸಿ ಚುನಾವಣೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವದ ಬಲವರ್ಧನೆಗೆ ಕಣಿವೆಯ ತುಡಿತ ಕಂಡು ಸಂತೋಷವಾಗಿದೆ ಎಂದು ಹೇಳಿದ್ದಾರೆ. ಸಂಪೂರ್ಣ ಶಾಂತಿಯುತ ಮತದಾನ ನಡೆದಿರುವುದು ಐತಿಹಾಸಿಕ ಎಂದಿರುವ ಪ್ರಧಾನಿ ಮೋದಿ, ಯಶಸ್ವಿ ಬಿಡಿಸಿ ಚುನಾವಣೆಗೆ ಕಣಿವೆ ರಾಜ್ಯವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ಮೋದಿ-ಶಾ ಆಡಿದ್ದ ’ಮಂಡಲದ ಆಟದ’ ಪರಿಣಾಮವೇ ಆರ್ಟಿಕಲ್ 370 ರದ್ದು!