Asianet Suvarna News Asianet Suvarna News

'ಅನರ್ಹ ಶಾಸಕರ ಪರ-ವಿರೋಧ ತೀರ್ಪು ಬಂದ್ರೆ ಬಿಜೆಪಿ ಬಳಿ ಪ್ಲಾನ್ A, B ರೆಡಿ'

ಒಂದು ಕಡೆ ರಾಜ್ಯದಲ್ಲಿ ಉಪಚುನಾವಣೆ ರಂಗೇರಿದ್ರೆ, ಮತ್ತೊಂದೆಡೆ ಅನರ್ಹರಿಗೆ ದಿಕ್ಕುತೋಚದಂತಾಗಿದೆ. ಇದರ ಮಧ್ಯೆ ಸಚಿವ ಅಶೋಕ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದೆ. ಏನದು? ಮುಂದೆ ಓದಿ

Plan A, B ready once disqualified MLAs order Pro are against In Court Says Ashok
Author
Bengaluru, First Published Sep 22, 2019, 4:01 PM IST

ಕೋಲಾರ, (ಸೆ.22): ಬಿಜೆಪಿ ಸರ್ಕಾರಕ್ಕಾಗಿ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿರುವ ಅನರ್ಹ ಶಾಸಕರ ಪರ ಅಥವಾ ವಿರೋಧ ತೀರ್ಪು ಬಂದರೆ, ಬಿಜೆಪಿ ಬಳಿ ಎ ಮತ್ತು ಬಿ ಪ್ಲಾನ್ ರೆಡಿ ಇದೆ ಎಂದು ಹೇಳುವ ಮೂಲಕ ಕಂದಾಯ ಸಚಿವ ಆರ್. ಅಶೋಕ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಸೋಮವಾರ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಉಪಚುನಾವಣೆ ಭವಿಷ್ಯ ನಿಂತಿದೆ. ಅನರ್ಹ ಶಾಸಕರ ಪರ ಅಥವಾ ವಿರೋಧ ತೀರ್ಪು ಬಂದರೆ, ಬಿಜೆಪಿ ಬಳಿ ಎ ಮತ್ತು ಬಿ ಪ್ಲಾನ್ ರೆಡಿ ಇದೆ. ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪಿನ ಮೇಲೆ ಕರ್ನಾಟಕ ರಾಜಕೀಯದ ಚಿತ್ರಣ ಬದಲಾಗುತ್ತೆ ಎಂದ ಹೇಳಿದರು

ಬೈ ಎಲೆಕ್ಷನ್‌ಗೆ ಅನರ್ಹರು ಸ್ಪರ್ಧಿಸಲು ಅವಕಾಶ ಇದ್ಯಾ? ಇಲ್ಲ?: ಸಂಪೂರ್ಣ ಮಾಹಿತಿ

ಕಾಂಗ್ರೆಸ್, ಜೆಡಿಎಸ್ ಪಕ್ಷದ ಬಂಡಾಯ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ  ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನು ಒಪ್ಪಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರಿಗೆ ಟಿಕೆಟ್ ಕೊಟ್ಟಿದ್ದರೂ ಸೋತಿದ್ದರು. ಹೀಗಾಗಿ ಟಿಕೆಟ್ ನೀಡಿಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

Follow Us:
Download App:
  • android
  • ios