ಅಡಿಲೇಡ್(ಫೆ.22): ಪೈಲೆಟ್ ಕೆಲಸ ತುಂಬ ರೋಮಾಂಚನಕಾರಿ ಅಂತಾ ನೀವು ತಿಳಿದಿದ್ದರೆ, ಇಲ್ಲೋರ್ವ ಪೈಲೆಟ್ ನ ಸಂದೇಶ ನಿಮ್ಮ ಕಲ್ಪನೆ ತಪ್ಪು ಎಂದು ಸಾಬೀತುಪಡಿಸುತ್ತದೆ.

ಅಡಿಲೇಡ್ ನ ಡೈಮಂಡ್ ಸ್ಟಾರ್ ಪ್ಲೇನ್ ಸಂಸ್ಥೆಯ ಪೈಲೆಟ್ ಓರ್ವ, ಹೆಚ್ಚಿನ ತರಬೇತಿ ಕಾರಣದಿಂದ ಬೇಸತ್ತು ಆಗಸದಲ್ಲೇ I Am Bored ಅಂತಾ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ತನ್ನ ತರಬೇತಿ ವಿಮಾನವನ್ನೇ ಆಗಸದಲ್ಲಿ ತಿರುಗಾಡಿಸಿ I Am Bored ಎಂದು ಚಿತ್ತಾರ ಬಿಡಿಸಿದ್ದಾನೆ ಈ ಪುಣ್ಯಾತ್ಮ. ಪೈಲೆಟ್ ಬಿಡಿಸಿರುವ ಚಿತ್ರ ಭೂಮಿಯಿಂದ ಕಾಣುವುದಿಲ್ಲವಾದರೂ, ವಿಮಾನವನ್ನು ಟ್ರ್ಯಾಕ್ ಮಾಡುವ ಏವಿಯೇಶನ್ ಫಾಲೋವರ್ಸ್ ಗಳಿಗೆ ಈ ಅಕ್ಷರದ ಚಿತ್ತಾರ ಕಂಡಿದೆ.