5 ವರ್ಷದಲ್ಲೇ ಪೆಟ್ರೋಲ್ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆ

First Published 21, Apr 2018, 9:11 AM IST
Petrol Diesel Price Hike
Highlights

ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಏರಿಕೆ ಕಂಡಿವೆ. ಈ ಮೂಲಕ ಪೆಟ್ರೋಲ್ ದರ 5 ವರ್ಷಗಳ ಗರಿಷ್ಠದತ್ತ ಸಾಗಿದ್ದರೆ, ಡೀಸೆಲ್ ಮತ್ತೊಂದು ಸಾರ್ವಕಾಲಿಕ ಗರಿಷ್ಠದ ದಾಖಲೆ ಮುಟ್ಟಿದೆ.

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಏರಿಕೆ ಕಂಡಿವೆ. ಈ ಮೂಲಕ ಪೆಟ್ರೋಲ್ ದರ 5 ವರ್ಷಗಳ ಗರಿಷ್ಠದತ್ತ ಸಾಗಿದ್ದರೆ, ಡೀಸೆಲ್ ಮತ್ತೊಂದು ಸಾರ್ವಕಾಲಿಕ ಗರಿಷ್ಠದ ದಾಖಲೆ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 3 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿರುವ ಹಿನ್ನೆಲೆಯಲ್ಲಿ ದೇಶೀಯವಾಗಿಯೂ ಬೆಲೆ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್ ದರ 75.25 ರು. ಇದ್ದರೆ, ಡೀಸೆಲ್ ದರವೂ 66.41 ರು.ಗೆ ಏರಿಕೆಯಾಗಿದೆ. 2012 ರಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 82 ರು.ಗೆ ತಲುಪಿದ್ದು ಇದುವರೆಗಿನ ಗರಿಷ್ಠ ಮಟ್ಟವಾಗಿದೆ.

2018ರ ಆರಂಭದಿಂದ ಇದುವರೆಗೂ ಪೆಟ್ರೋಲ್ ದರ 4 ರು., ಡೀಸೆಲ್ 6 ರು.ವರೆಗೂ ಏರಿಕೆಯಾಗಿದೆ. ತೈಲ ಬೆಲೆ ಏರಿಕೆ ಮುಂಬರುವ ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಭೀತಿಯಿಂದಾಗಿ, ಸದ್ಯಕ್ಕೆ ತೈಲ ಬೆಲೆ ಏರಿಕೆ ಮಾಡದಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸೂಚಿಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದರ ಹೊರತಾಗಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಂತಿಲ್ಲ.

loader