ಒಡತಿ ಇಲ್ಲದಾಗ ಭರ್ಜರಿ ಶಾಪಿಂಗ್ ಮಾಡಿದ ಗಿಳಿ!
ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ
ಗಿಳಿಗಳು ಮನುಷ್ಯರ ಧ್ವನಿ ಅನುಕರಣೆ ಮಾಡುವುದು ಗೊತ್ತೇ ಇದೆ. ಆದರೆ ಬ್ರಿಟನ್ ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ ಮಾಲೀಕರನ್ನು ಪೇಚಿಗೆ ಗುರಿ ಮಾಡಿದೆ.
ಅಲೆಕ್ಸಾದಲ್ಲಿ ಧ್ವನಿ ಮೂಲಕವೇ ವಸ್ತುಗಳ ಖರೀದಿ ಮಾಡಬಹುದು. ಇತ್ತೀಚೆಗೆ ಹೀಗೆ ಆಕಸ್ಮಿಕವಾಗಿ ಗಿಳಿ ಅಲೆಕ್ಸಾ ಮೂಲಕ ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಬ್ರಾಕೋಲಿ, ಐಸ್ ಕ್ರೀಂ, ಬಲ್‌್ಬ, ಗಾಳಿಪಟ ಆರ್ಡರ್ ಮಾಡಿದೆ. ಮಾಲಕಿ ಮನೆಗೆ ಬಂದ ಬಳಿಕ ವಿಷಯ ಬೆಳಕಿಗೆ ಬಂದಿದೆ.