ರೇಪ್ ಘಟನೆಗಳಿಗೆ ಪೋಷಕರೇ ಕಾರಣ : ಬಿಜೆಪಿ ಶಾಸಕ

Parents responsible for incidents of rape, says UP BJP MLA
Highlights

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಅವರ ಪೋಷಕರೇ ಕಾರಣ ಎಂದು ಹೇಳಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು, ವಿವಾದದ ಕಿಡಿ ಹೊತ್ತಿಸಿದ್ದಾರೆ.

ಬಲಿಯಾ(ಉತ್ತರ ಪ್ರದೇಶ): ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಅವರ ಪೋಷಕರೇ ಕಾರಣ ಎಂದು ಹೇಳಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು, ವಿವಾದದ ಕಿಡಿ ಹೊತ್ತಿಸಿದ್ದಾರೆ.
ಈ ಹಿಂದೆ ಮೂರು ಮಕ್ಕಳ ತಾಯಿಗೆ ಯಾರೊಬ್ಬರೂ ಅತ್ಯಾಚಾರ ಮಾಡಲ್ಲ ಎಂಬುದಾಗಿ ಹೇಳಿ ವಿವಾದಕ್ಕೀಡಾಗಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು, ‘ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅವರ ಪೋಷಕರೇ ಕಾರಣ,’ ಎಂದು ಹೇಳಿದ್ದಾರೆ.

ಅಲ್ಲದೆ, ಮಕ್ಕಳು ಮನಸ್ಸಿಗೆ ಬಂದಂತೆ ತಿರುಗಾಡಲು ಬಿಡಬೇಡಿ ಎಂದು ಅವರು ಪೋಷಕರಿಗೆ ಸಲಹೆ ನೀಡಿದ್ದಾರೆ. 

loader