ಕರ್ನೂಲು(ನ.07): ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಪತಿಕೊಂಡದ ತಹಶಿಲ್ದಾರ್ ಮಹೇಶ್ವರಿ ತಮ್ಮ ಕಚೇರಿಯಲ್ಲಿ ಹಗ್ಗದ ಬೇಲಿ ನಿರ್ಮಿಸಿದ್ದು, ಈ ಗಡಿ ಮೀರಿ ಒಳಗೆ ಬರದಂತೆ ತಮ್ಮನ್ನು ಕಾಣಲು ಬರುವ ಜನರಿಗೆ ಸುಚನೆ ನೀಡಿದ್ದಾರೆ.

ಪಕ್ಕದ ತೆಲಂಗಾಣದಲ್ಲಿ ತಹಶೀಲ್ದಾರ್ ವಿಜಯಾ ರೆಡ್ಡಿ ಅವರನ್ನು ಆಗುಂತಕನೋರ್ವ ಕಚೇರಿಯಲ್ಲೇ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯಿಂದ ಎಚ್ಚೆತ್ತು ತಮ್ಮ ಕುರ್ಚಿ ಸುತ್ತ ಹಗ್ಗದ ಬೇಲಿ ನಿರ್ಮಿಸಿರುವುದಾಗಿ ಮಹೇಶ್ವರಿ ತಿಳಿಸಿದ್ದಾರೆ.

ಮಹಿಳಾ ಅಧಿಕಾರಿಗಳಲ್ಲಿ ಅಭದ್ರತೆಯ ಭಾವ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಲು ಬರುವ ಜನರು ಕಚೇರಿಯಲ್ಲಿ ಈ ಗಡಿ ದಾಟಿ ಬರಬಾರದು ಎಂದು ಮಹೇಶ್ವರಿ ಹಗ್ಗ ಕಟ್ಟಿದ್ದಾರೆ.

ಅಯ್ಯೋ ದೇವರೇ...! ಕಚೇರಿ ಆವರಣದಲ್ಲೇ ಬೆಂಕಿ ಹಚ್ಚಿ ಮಹಿಳಾ ತಹಶೀಲ್ದಾರ್ ಕಗ್ಗೊಲೆ!

ಆದರೆ ಮಹೇಶ್ವರಿ ನಿರ್ಧಾರವನ್ನು ಪ್ರಶ್ನಿಸಿರುವ ಸ್ಥಳೀಯರು, ಅವರೊಂದಿಗೆ ಎಂದಿಗೂ ಅನುಚಿತವಾಗಿ ನಡೆದುಕೊಳ್ಳದ ನಮ್ಮನ್ನು ನಡೆಸಿಕೊಳ್ಳುವ ರೀತಿಗೆ ಬೇಸರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ತಮ್ಮ ಕುರ್ಚಿ ಸುತ್ತಲೂ ಹಗ್ಗ ಕಟ್ಟುವ ಮಹೇಶ್ವರಿ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಮಹೇಶ್ವರಿ ನಿರ್ಧಾರ ಸ್ವಾಗತಿಸಿದ್ದರೆ ಮತ್ತೆ ಕೆಲವರು ನಿರ್ಧಾರವನ್ನು ಪ್ರಶ್ನಿಸಿದ್ದಾರೆ.