ಇಸ್ಲಮಾಬಾದ್ :  ನಟಿಯೋರ್ವಳನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣವೊಂದು ಪಾಕಿಸ್ತಾನದ ಕ್ಯಾಬರ್ ಪಂಕ್ತುಂಕ್ವಾ ಪ್ರದೇಶದಲ್ಲಿ ನಡೆದಿದೆ. 

ನಟಿ ಹಾಗೂ ಹಾಡುಗಾರ್ತಿ ರೇಷ್ಮಾ ಅವರನ್ನು ಪತಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಆಕೆಯ ಪತಿಗೆ ರೇಷ್ಮಾ ಅವರು 4ನೇ ಪತಿಯಾಗಿದ್ದರು ಎನ್ನಲಾಗಿದೆ. ರೇಷ್ಮಾ ಅವರು ಅವರ ಸಹೋದರನ ಮನೆಯಲ್ಲಿ ವಾಸವಾಗಿದ್ದರು. 

ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಇದ್ದು ಏಕಾ ಏಕಿ ಮನೆಗೆ ನುಗ್ಗಿದ ರೇಷ್ಮಾ ಪತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 

ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವರ್ಷ ಪಾಕಿಸ್ತಾನದಲ್ಲಿ ನಟಿಯರ ಮೇಲೆ ನಡೆದ ದಾಳಿಯ 15ನೇ ಪ್ರಕರಣ ಇದಾಗಿದೆ.