ಪಾಕ್‌ನಲ್ಲಿ 7ರ ಬಾಲಕಿ ಮೇಲೆ ಅತ್ಯಾಚಾರ ಮಾಡಿದವಗೆ ಗಲ್ಲು

news | Sunday, February 18th, 2018
Suvarna Web Desk
Highlights

7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆಗೈದಿದ್ದ ಅಪರಾಧಿಗೆ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ನ್ಯಾಯಾಲಯವು ಪ್ರಕರಣ ಇತ್ಯರ್ಥ ಮಾಡಿದೆ.

ಲಾಹೋರ್‌: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆಗೈದಿದ್ದ ಅಪರಾಧಿಗೆ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ನ್ಯಾಯಾಲಯವು ಪ್ರಕರಣ ಇತ್ಯರ್ಥ ಮಾಡಿದೆ.

ಬಾಲಕಿ ಅಪಹರಣ, ಅತ್ಯಾಚಾರ, ಕೊಲೆ ಆಪಾದನೆಯ ಮೇಲೆ ಇಮ್ರಾನ್‌ ಆಲಿಗೆ (23) ಕೋರ್ಟ್‌ ಈ ಶಿಕ್ಷೆ ವಿಧಿಸಿದೆ. ಅಲ್ಲದೆ 8 ಇತರ ಬಾಲಕಿಯರ ಹತ್ಯೆಗೈದ ಆರೋಪದ ಮೇಲೆ 7 ವರ್ಷ ಜೈಲು ಮತ್ತು 10 ಲಕ್ಷ ದಂಡವನ್ನೂ ಕೋರ್ಟ್‌ ವಿಧಿಸಿದೆ. ‘ತೀರ್ಪು ಸಮಾಧಾನ ತರಿಸಿದೆ, ಆದರೆ ಅಪರಾಧಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು’ ಎಂದು ಬಾಲಕಿ ತಂದೆ ಹೇಳಿದ್ದಾರೆ.

ಇಮ್ರಾನ್‌ 7 ವರ್ಷದ ಬಾಲಕಿಯನ್ನು ಜನವರಿಯಲ್ಲಿ ಅತ್ಯಾಚಾರ ಮಾಡಿ ಕೊಲೆಗೈದು ಲಾಹೋರ್‌ ಸಮೀಪದ ಕಸೂರ್‌ ನಗರದ ತಿಪ್ಪೆಯಲ್ಲಿ ಬಳಿ ಎಸೆದು ಹೋಗಿದ್ದ. ಈ ಪ್ರಕರಣ ದೇಶಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ಸಾರ್ವಜನಿಕರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಅನಂತರ 2 ವಾರಗಳ ಬಳಿಕ ಆರೋಪಿ ಇಮ್ರಾನ್‌ ಆಲಿಯನ್ನು ಪೊಲೀಸರು ಬಂಧಿಸಿದ್ದರು.

Comments 0
Add Comment

    ರಿಸ್ಕ್ ಡಿಕೆಶಿಗೆ ಖಡಕ್ ವಾರ್ನಿಂಗ್ : ಶ್ಲಾಘನೆ ನಂತರ ಎಚ್ಚರಿಕೆ

    karnataka-assembly-election-2018 | Thursday, May 24th, 2018