ಪಾಕ್‌ ಮಾಜಿ ಕ್ರಿಕೆಟಿಗ ಇಮ್ರಾನ್‌ ಹಿಂದೂ ದೇವರಂತೆ!

First Published 13, Apr 2018, 7:52 AM IST
Pakistan former cricketer Imran Khan depicted as Hindu god pak ministry orders to enquiry
Highlights

ಹಿಂದೂಗಳ ದೇವರ ಚಿತ್ರಗಳಿಗೆ ಇಮ್ರಾನ್‌ ಮುಖ ಅಳವಡಿಕೆ

ಕೃತ್ಯದ ಆರೋಪಿಗಳ ಸೆರೆಗೆ ಪಾಕ್‌ ಗೃಹ ಇಲಾಖೆ ನಿರ್ದೇಶನ

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನ ತೆಹ್ರೀಕ್‌-ಎ-ಇನ್ಸಾಫ್‌(ಪಿಟಿಐ) ಮುಖ್ಯಸ್ಥ ಇಮ್ರಾನ್‌ ಖಾನ್‌ ಅವರನ್ನು ಹಿಂದೂಗಳ ದೇವರಂತೆ ಬಿಂಬಿಸಲಾದ ಚಿತ್ರವು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಇದಕ್ಕೆ ದೇಶದ ಹಿಂದೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಮ್ರಾನ್‌ ಖಾನ್‌ ಅವರು ಹಿಂದೂಗಳ ದೇವರಂತೆ ಕಾಣುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವರನ್ನು ಬಂಧಿಸುವಂತೆ ಗೃಹ ಸಚಿವಾಲಯ ನಿರ್ದೇಶನ ನೀಡಿದ್ದಾರೆ.

ಹಿಂದೂಗಳ ದೇವರ ಅವಹೇಳನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ರಾನ್‌ ಖಾನ್‌ರನ್ನು ಹಿಂದೂ ದೇವತೆಗಳ ಚಿತ್ರಗಳಿಗೆ ಇಮ್ರಾನ್‌ ಖಾನ್‌ ಅವರ ಮುಖ ಅಳವಡಿಸಿದ ಸಂಬಂಧ ಹಿಂದೂ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ರಾಷ್ಟ್ರೀಯ ವಿಧಾನಸಭೆ ಸ್ಪೀಕರ್‌ ಸರ್ದಾರ್‌ ಅಯಾಜ್‌ ಸಾದಿಕ್‌ ಅವರು ಗೃಹ ಸಚಿವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಈ ಕೃತ್ಯದ ಹಿಂದಿರುವವರನ್ನು ಪತ್ತೆ ಮಾಡಿ, ಅವರನ್ನು ಬಂಧಿಸುವಂತೆ ಗೃಹ ಸಚಿವಾಲಯ ಸೂಚನೆ ನೀಡಿದೆ ಎನ್ನಲಾಗಿದೆ.

ಆದರೆ, ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷದಲ್ಲಿ ಕೆಲವು ಹಿಂದೂ ಕಾರ್ಯಕರ್ತರಿದ್ದು, ಅವರೇ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ ಎಂದು ಪಿಟಿಐ ಉಪಾಧ್ಯಕ್ಷ ಶಾ ಮೆಹಬೂಬಾ ತಿಳಿಸಿದ್ದಾರೆ.

loader