ಕೋಳಿ ಮೇಲೆ ರೇಪ್, ಅತ್ಯಾಚಾರಿ ಅರೆಸ್ಟ್: ರೇಪ್ ಮಾಡಿದ್ದು ಏಕೆ ಗೊತ್ತೆ ?

news | Tuesday, November 14th, 2017
Suvarna Web Desk
Highlights

ಆರೋಪಿಯ ಪಕ್ಕದಮನೆಯ ಮನ್ಸಾಬ್ ಹಸನ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನೆರೆಮನೆಯಾತ ಅನ್ಸರ್ ಹುಸೇನ್ ತನ್ನ ಕೋಳಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ

ಇತ್ತೀಚೆಗೆ ಚಿಕ್ಕ ಮಕ್ಕಳ ಮೇಲೆ, ವಯೋವೃದ್ಧರ ಮೇಲೆ ಅತ್ಯಾಚಾರ ನಡೀತಿರೋದು ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ ಇಲ್ಲೊಬ್ಬ ಕಾಮ ಪಿಶಾಚಿ ಕೋಳಿ ಮೇಲೆ ಅತ್ಯಾಚಾರ ಮಾಡಿ ಸಿಕ್ಕಿಬಿದ್ದಿದ್ದಾನೆ. ಇಂಥ ಒಂದು ವಿಚಿತ್ರ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. 14 ವರ್ಷದ ಬಾಲಕ ಹುಸೇನ್ ಎಂಬಾತ ಕೋಳಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹಫಿಜಾಬಾದ್‌ ನಿವಾಸಿಯಾಗಿರುವ ಆರೋಪಿ ಬಾಲಕನ್ನು ಬಂಧಿಸಲಾಗಿದೆ. ಆರೋಪಿಯ ಪಕ್ಕದಮನೆಯ ಮನ್ಸಾಬ್ ಹಸನ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನೆರೆಮನೆಯಾತ ಅನ್ಸರ್ ಹುಸೇನ್ ತನ್ನ ಕೋಳಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾನೆ. ಈ ಘಟನೆಗೆ ನಸ್ರುಲ್ಲಾ ಮತ್ತು ತುಫೈಲ್ ಎಂಬಿಬ್ಬರು ಪ್ರತ್ಯಕ್ಷದರ್ಶಿಗಳಿದ್ದು, ವೈದ್ಯಕೀಯ ಪರೀಕ್ಷೆಯಲ್ಲೂ ಕೂಡ ಕೋಳಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಾತ್ರಿಯಾಗಿದೆ.  ಆರೋಪಿ ಹುಸೇನ್ ತಪ್ಪೊಪ್ಪಿಕೊಂಡಿದ್ದು, ಲೈಂಗಿಕ ಹತಾಶೆಯಿಂದ ಹೀಗೆ ಮಾಡಿದ್ದಾಗಿ ಹೇಳಿದ್ದಾನೆ

Comments 0
Add Comment