ಪಾಕ್‌: ಎದ್ದು ನಿಂತು ಹಾಡಲಿಲ್ಲವೆಂದು ಗರ್ಭಿಣಿ ಗಾಯಕಿ ಹತ್ಯೆ

First Published 13, Apr 2018, 8:08 AM IST
Pak pregnancy singer killed
Highlights

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನಡೆದ ಭಾರೀ ಜನಸಂಖ್ಯೆ ನೆರೆದಿದ್ದ ಸಂಗೀತ ಪ್ರದರ್ಶನವೊಂದರಲ್ಲಿ ನಿಂತುಕೊಂಡು ಹಾಡಲಿಲ್ಲ ಎಂದು ಗರ್ಭಿಣಿ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ.

ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ನಡೆದ ಭಾರೀ ಜನಸಂಖ್ಯೆ ನೆರೆದಿದ್ದ ಸಂಗೀತ ಪ್ರದರ್ಶನವೊಂದರಲ್ಲಿ ನಿಂತುಕೊಂಡು ಹಾಡಲಿಲ್ಲ ಎಂದು ಗರ್ಭಿಣಿ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ.

ಕಂಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಗೀತ ಕಾರ್ಯಕ್ರಮ ನಡೆಯುತಿತ್ತು. ಆರು ತಿಂಗಳ ಗರ್ಭಿಣಿ ಸಮೀನಾ ಸಮೂನ್‌ ಕಾರ್ಯಕ್ರಮ ನೀಡುತ್ತಿದ್ದರು. ಈ ಸಂದರ್ಭ ತಾರಿಖ್‌ ಅಹ್ಮದ್‌ ಜತೋಯಿ ಎಂಬಾತ ಸಮೀನಾಗೆ ನಿಂತುಕೊಂಡು ಹಾಡುವಂತೆ ಒತ್ತಾಯಿಸಿದ್ದ. ಅದಕ್ಕೆ ಅವರು ಆಗುವುದಿಲ್ಲ ಎಂದು ನಿಲ್ಲಲು ನಿರಾಕರಿಸಿದ್ದರು.

ಆದರೆ, ಇತರರು ಸಹಕರಿಸಿದ ಬಳಿಕ ಆಕೆ ಎದ್ದು ನಿಲ್ಲುತ್ತಿದ್ದಂತೆ, ಪಾನಮತ್ತನಾಗಿದ್ದ ತಾರಿಖ್‌ ತನ್ನಲ್ಲಿದ್ದ ರಿವಾಲ್ವರ್‌ ತೆಗೆದು ಆಕೆಯ ಹಣೆಯ ಮೇಲೆ ಗುಂಡಿಕ್ಕಿದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಬಹಿರಂಗಗೊಂಡಿದ್ದು, ಎಲ್ಲೆಡೆ ಪ್ರಸಾರವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

loader