ಮುಂಬೈ (ಜ. 14): ಮೈತ್ರಿಕೂಟ ಏರ್ಪಟ್ಟರೆ ಮಿತ್ರಪಕ್ಷಗಳು ಗೆಲ್ಲುವಂತೆ ನೋಡಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಮಾಜಿ ಮಿತ್ರರಿಗೂ ಮಣ್ಣು ಮುಕ್ಕಿಸುತ್ತೇವೆ ಎಂದು ಶಿವಸೇನೆಗೆ ಪರೋಕ್ಷ ಎಚ್ಚರಿಕೆ ನೀಡಿದ್ದ
ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.

ಶಿವಸೇನೆಯನ್ನು ಮಣಿಸುವವ್ಯಕ್ತಿ ಇನ್ನೂ ಹುಟ್ಟೇ ಇಲ್ಲ ಎಂದು ಅಬ್ಬರಿಸಿದ್ದಾರೆ. ವರ್ಲಿಯಲ್ಲಿ ಸಾರ್ವಜನಿಕ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಉದ್ಧವ್, ಒಮ್ಮೆ ಜನರ ವಿಶ್ವಾಸವನ್ನು ಕಳೆದುಕೊಂಡರೆ, ಯಾವುದೇ ಯುದ್ಧದಲ್ಲಿ ಬೇಕಾದರೂ ಸೋಲುತ್ತೀರಿ ಎಂದು ಲೋಕಸಭೆ ಚುನಾವಣೆಯನ್ನು ಪಾಣಿಪತ್ ಕದನಕ್ಕೆ ಹೋಲಿಸಿದ ಶಾ ಅವರಿಗೆ ಟಾಂಗ್ ನೀಡಿದರು.