ಸುಪ್ರಿಂಗೆ ಜೋಸೆಫ್ ನೇಮಕ : ಕೇಂದ್ರ, ಬಾರ್ ಕೌನ್ಸಿಲ್ ನಡುವೆ ಹಗ್ಗಜಗ್ಗಾಟ

First Published 26, Apr 2018, 5:21 PM IST
Ok For Centre To Reject Justice Joseph Says Chief Justice
Highlights

ಜೋಸೆಫ್ ಅವರ ಹೆಸರನ್ನು ನಾಮನಿರ್ದೇಶನ ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ನ್ಯಾಯಯುತ ಹಾಗೂ ಸೂಕ್ತ ವ್ಯಕ್ತಿಯನ್ನು ಮರುಪರಿಶೀಲಿಸುವಂತೆ  ಸುಪ್ರೀಂ ಕೊಲಿಜಿಯಂ ಹಾಗೂ ಐವರು ಹಿರಿಯ ನ್ಯಾಯಾಧೀಶರಿಗೆ ಸೂಚಿಸಿದೆ. ನಿನ್ನೆಯಷ್ಟೆ  ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು  ನೇಮಿಸಲಾಗಿತ್ತು.

ನವದೆಹಲಿ(ಏ.26): ಉತ್ತರಖಂಡ್ ಮುಖ್ಯ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಬಾರ್ ಕೌನ್ಸಿಲ್ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ.
ಜೋಸೆಫ್ ಅವರ ಹೆಸರನ್ನು ನಾಮನಿರ್ದೇಶನ ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ನ್ಯಾಯಯುತ ಹಾಗೂ ಸೂಕ್ತ ವ್ಯಕ್ತಿಯನ್ನು ಮರುಪರಿಶೀಲಿಸುವಂತೆ  ಸುಪ್ರೀಂ ಕೊಲಿಜಿಯಂ ಹಾಗೂ ಐವರು ಹಿರಿಯ ನ್ಯಾಯಾಧೀಶರಿಗೆ ಸೂಚಿಸಿದೆ. ನಿನ್ನೆಯಷ್ಟೆ  ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು  ನೇಮಿಸಲಾಗಿತ್ತು.
ನ್ಯಾಯಮೂರ್ತಿಗಳ ಹಿರಿತನ ಪಟ್ಟಿಯಲ್ಲಿ ಜೋಸೆಫ್ ಅವರು 42ನೇ ಸ್ಥಾನದಲ್ಲಿದ್ದಾರೆ. ಇವರಿಗಿಂತಲೂ 11 ಮಂದಿ ಹಿರಿಯರಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ. 
ಕೇಂದ್ರವು ಜೋಸೆಫ್ ಅವರ ಹೆಸರನ್ನು  ತಿರಸ್ಕರಿಸಿರುವ ನಿರ್ಧಾರವನ್ನು  ಬಾರ್ ಕೌನ್ಸಿಲ್ ಆಫ್ ಇಂಡಿಯಾ ಖಂಡಿಸಿದ್ದು ’ಇದು ತೀರ ಆತಂಕಕಾರಿಯಾದ ವಿಚಾರ ಎಂದಿದೆ.

loader