ಎಣ್ಣೆ ತುಂಬ್ಕೊಳ್ರೋ: ಗಾಯಾಳು ಬಿಟ್ಟು ಎಣ್ಣೆಗಾಗಿ ಬಡಿದಾಟ!

ರಸ್ತೆ ಬದಿ ಅಡುಗೆ ಎಣ್ಣೆಗಾಗಿ ವಾಹನಕ್ಕೆ ಮುಗಿಬಿದ್ದ ಜನರು! ಇಳಕಲ್-ಹುನಗುಂದ ಮಧ್ಯೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಜನಜಂಗುಳಿ! ಎಣ್ಣೆ ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಜನರು! ಕ್ಯಾಂಟೇನರ್ ಡಿಕ್ಕಿಯಾಗಿದ್ದರಿಂದ ರಸ್ತೆ ಎಣ್ಣೆಮಯ! ಬಳ್ಳಾರಿ ಮೂಲದ ಸುಮೋ ವಾಹನ ಡಿಕ್ಕಿ! ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ! ಪೊಲೀಸರಿದ್ದರೂ ಜನದಟ್ಟಣೆ ನಿಯಂತ್ರಣಕ್ಕೆ ಬಂದಿಲ್ಲ

First Published Sep 16, 2018, 12:12 PM IST | Last Updated Sep 19, 2018, 9:27 AM IST

ಬಾಗಲಕೋಟೆ(ಸೆ.16): ನಿಂತಿದ್ದ ಎಣ್ಣೆ ತುಂಬಿದ್ದ ಕ್ಯಾಂಟೇನರ್ ಗೆ ಟಾಟಾ ಸುಮೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಇಡೀ ರಸ್ತೆಯಲ್ಲಿ ಅಡುಗೆ ಎಣ್ಣೆ ಸೋರಿಕೆಯಾಘಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಇಲ್ಲಿನ ಇಳಕಲ್-ಹುನಗುಂದ ನಡುವಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದ್ದು, ಸೋರುತ್ತಿರುವ ಅಡುಗೆ ಎಣ್ಣೆಯನ್ನು ತುಂಬಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ. ಕೊಡ, ಬಕೇಟ್, ಕ್ಯಾನ್ನಲ್ಲಿ ಅಡುಗೆ ಎಣ್ಣೆ ತುಂಬಿಕೊಳ್ಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..