ದಾಖಲೆ ಏರಿಕೆ ಬೆನ್ನಲ್ಲೇ ತೈಲ ಬೆಲೆ 1.50 ರು. ಇಳಿಸಲು ಬಿಜೆಪಿ ಸಲಹೆ

First Published 23, Apr 2018, 9:18 AM IST
Oil Price May Decrease BJP Proposal
Highlights

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಅವಧಿಯಲ್ಲೇ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಾಖಲೆಯ ಏರಿಕೆ ಕಂಡಿದೆ. ಪೆಟ್ರೋಲ್‌ ಬೆಲೆ ಭಾನುವಾರ ಪ್ರತಿ ಲೀ.ಗೆ 74.40 ರು. ಆಗಿದ್ದರೆ, ಡೀಸೆಲ್‌ ಲೀ.ಗೆ 65.65 ರು.ಗೆ ಏರಿಕೆಯಾಗಿದೆ.

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಅವಧಿಯಲ್ಲೇ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ದಾಖಲೆಯ ಏರಿಕೆ ಕಂಡಿದೆ. ಪೆಟ್ರೋಲ್‌ ಬೆಲೆ ಭಾನುವಾರ ಪ್ರತಿ ಲೀ.ಗೆ 74.40 ರು. ಆಗಿದ್ದರೆ, ಡೀಸೆಲ್‌ ಲೀ.ಗೆ 65.65 ರು.ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಲೆ ಇಳಿಕೆಯಾಗಲು ಅಬಕಾರಿ ಸುಂಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ, ಬಿಜೆಪಿ ಸಲಹೆ ನೀಡಿದೆ. ಸರ್ಕಾರ ಈ ಸಲಹೆ ಸ್ವೀಕರಿಸಿದಲ್ಲಿ ತೈಲ ಬೆಲೆ 1ರು.ಯಿಂದ 1.50 ರು.ಯಷ್ಟುಇಳಿಕೆಯಾಗಲಿದೆ ಎಂಬ ನಿರೀಕ್ಷೆಯಿದೆ.

‘ಮೂಲ ಅಬಕಾರಿ ಸುಂಕದಲ್ಲಿ 1.50 ರು. ಇಳಿಕೆ ಮಾಡುವಂತೆ ನಾವು ಸಲಹೆ ನೀಡಿದ್ದೇನೆ. ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯ ಹಣಕಾಸು ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬುದು ತಿಳಿದುಬಂದಿದೆ ಎಂದು ಬಿಜೆಪಿ ಇಂಧನ ವಿಭಾಗದ ಸಂಚಾಲಕ ನರೇಂದ್ರ ತನೇಜಾ ಹೇಳಿದ್ದಾರೆ.

ಈ ಹಿಂದೆ ಹಲವು ಬಾರಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿದಾಗ, ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಂಡಿತ್ತು. ಈ ಮೂಲಕ ಇಳಿಕೆಯ ಲಾಭ ಗ್ರಾಹಕರಿಗೆ ಪೂರ್ಣವಾಗಿ ತಲುಪದಂತೆ ಮಾಡಿತ್ತು.

loader