ಬೆಂಗಳೂರು[ಮಾ. 12] ರೌಡಿ ಲಕ್ಷ್ಮಣ್‌ ಕೊಲೆ ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗವಾಗಿದ್ದು, ಈ ಹತ್ಯೆಯಲ್ಲಿ ಹೆಣ್ಣಿನ ನೆರಳಿದೆ ಎಂದು ಪೊಲೀಸರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ರೌಡಿ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ನಡೆದ ಮಾತುಕತೆ ಸದ್ಯ ಪೊಲೀಸರಿಗೆ ಹೊಸ ಅಂಶಗಳ ಪತ್ತೆಗೆ ಕಾರಣವಾಗಿದೆ.

ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿ ಬಂದಿದೆ. ಜತೆಗೆ ಕೊಲೆಗೆ ಅಸಲಿ ಕಾರಣಗಳು ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. 

ಸಿಸಿಬಿ ಪೊಲೀಸರು ಇದನ್ನು ಸವಾಲಿನ ರೀತಿ ತೆಗೆದುಕೊಂಡಿದ್ದಾರೆ. ಕೊಲೆಯಲ್ಲಿ ವರ್ಷಿಣಿ ಪಾತ್ರ ಏನು ಎಂಬುದನ್ನು ಸಚಿವರಿಗೆ ವಿವರಿಸಲಾಗಿದೆ.

"

 

 

"

 

"