ಬೆಂಗಳೂರು (ಜು.14) ಇಂಟರ್ ನ್ಯಾಶನಲ್ ಆರ್ಟ್ ಆ್ಯಂಡ್ ಕಲ್ಚರಲ್ ಫೌಂಡೇಶನ್ ನ ನಿರ್ದೇಶಕ ಶ್ರೀವತ್ಸ ಶಾಂಡಿಲ್ಯ ನೇತೃತ್ವದಲ್ಲಿ ಅನಿವಾಸಿ ಭಾರತೀಯರಿಂದ 2 ದಿನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಲ್ಲೇಶ್ವರದ 14ನೇ ಕ್ರಾಸ್‌ ನ ಸೇವಾಸದನ ಸಭಾಭವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದೆ.

ಜುಲೈ 14 ರಂದು ಯುಎಸ್ಎ ಈಶಾಂಜಲಿ ಡ್ಯಾನ್ಸ್ ಅಕಾಡೆಮಿ ಪ್ರಜ್ಞಾ ಯೋಗೇಶ್, ಯುಎಸ್ಎಯ ಭಾರತ ದರ್ಶನ ಸ್ಕೂಲ್ ಆಫ್ ಇಂಡಿಯನ್ ಕ್ಲಾಸಿಕಲ್ನ ಸೌಜನ್ಯ ಮಧುಸೂದನ್, ಯುಎಸ್ಎಯ ಲಾಸ್ಯ ರಂಜಿನಿ ಶಾಲೆಯ ಅನಿತಾ ಅಡಗದ್ದೆ ಅವರಿಂದ ಕಾರ್ಯಕ್ರಮವಿದೆ.

ಜುಲೈ 15 ರಂದು ಜರ್ಮನಿಯ ಶ್ರೀಧನ್ಯ ರಾಮನ್ ಸಂಸ್ಥೆ ನಿರ್ದೇಶಕಿ ಸೌರಭಾ, ಯುಎಸ್ಎಯ ನಿತ್ಯಾ, ನೃತ್ಯ ಡ್ಯಾನ್ಸ್ ಕಂಪನಿಯ ಜೋತ್ಸ್ನಾ ಶ್ರೀನಾಥ್, ಯುಎಸ್ಯ ಗುರು ನಿತಾ ಮಲ್ಯ ಸಂಪ್ರದಾ ಸ್ಕೂಲ್ ಆಫ್ ಡ್ಯಾನ್ಸ್ ನ ಪ್ರಾರ್ಥನಾ ಶ್ಯಾಂ ಪ್ರಸಾದ್ ಮತ್ತು ಯುಎಸ್ಎಯ ಗುರು ಕೃಪಾ ಭಾಸ್ಕರನ್ ನಾಟ್ಯಪ್ರಾಣ ಶಾಲೆಯ ಕುಮಾರಿ ಅನನ್ಯಾ ರಾಜೇಶ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೋಟೋ ಜರ್ನಲಿಸ್ಟ್ ಆಗಿ ಗುರುತಿಸಿಕೊಂಡಿರುವ ಶ್ರೀವತ್ಸ ಶಾಂಡಿಲ್ಯ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ 9845106655 ಸಂಪರ್ಕಿಸಬಹುದು.