ಹಾಸನ[ಫೆ.27] ನಮ್ಮ ಸೈನ್ಯ ‌ಪ್ರಬಲವಾಗಿದೆ. ಜೈ ಜವಾನ್ ಜೈಕಿಸಾನ್ ಎನ್ನುವ ಏಕೈಕ ಪ್ರಧಾನಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ. ದೇಶ ಬಿಕ್ಕಟ್ಟಿನಲ್ಲಿದೆ, ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ‌ಒಟ್ಟಾಗಿ ಹೋರಾಡಬೇಕು. ಮೋದಿ ನಾಲ್ಕುವರೆ ವರ್ಷ ಏನು ಮಾಡಿದ್ದಾರೆ ಎನ್ನುವುದನ್ನು ಈಗ ಹೇಳಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ತಂತ್ರರಾಮಯ್ಯನ ಆಟಕ್ಕೆ ಬೆಚ್ಚಿಬಿದ್ದ ದಳಪತಿ

ಹಾಸನ ಜಿಲ್ಲೆ ‌ಅರಸೀಕೆರೆಯಲ್ಲಿ‌ ಮಾತನಾಡಿದ ದೇವೇಗೌಡ, 9 ತಿಂಗಳಲ್ಲಿ ‌ಸಿಎಂ ಕುಮಾರಸ್ವಾಮಿ ಸಾಕಷ್ಟು‌ ನೋವು ಅನುಭವಿಸಿದ್ದಾರೆ. ಈ ರಾಷ್ಟ್ರದಲ್ಲಿ ಯಾರಾದರು ಒಬ್ಬರು‌ ಚುನಾವಣೆ ಪೂರ್ವ ಅಥವಾ ಸಿಎಂ ಆದ ನಂತರ ಇಷ್ಟು ದೊಡ್ಡ ಪ್ರಮಾಣದ ಸಾಲಮನ್ನಾ ಮಾಡಿದ್ದಾರಾ? 130 ವರ್ಷ ಇತಿಹಾಸವುಳ್ಳ  ಕಾಂಗ್ರೆಸ್ ಪಕ್ಷ ಬಂದು ಕುಮಾರಸ್ವಾಮಿಯೇ ಸಿಎಂ ಆಗಲಿ‌ ಎಂದಿತು. ನಾನು ಬೇಡ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅವರನ್ನು ಮಾಡಿ ಎಂದಿದ್ದೆ. ಆದರೂ ಕುಮಾರಸ್ವಾಮಿಯೇ ಸಿಎಂ ಆಗಲಿ ನಮ್ಮ ಪಕ್ಷ ಬೆಂಬಲ‌ ನೀಡಲಿದೆ ಎಂದಿದ್ದರು ಎಂದು ರಾಜಕಾರಣದ ಇತಿಹಾಸ ಹೇಳಿದರು.

ಕುಮಾರಸ್ವಾಮಿ ಅಷ್ಟೊಂದು ಸಾಲಮನ್ನಾದ ಹಣ ಎಲ್ಲಿಂದ ತರುತ್ತಾರೋ ಎಂದು ಚಿಂತಿಸಿದ್ದೆ. ಎಲ್ಲವನ್ನೂ ನಿಭಾಯಿಸಿಕೊಂಡು ಸರ್ಕಾರವನ್ನು‌ ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳದೆ ದಿನ‌ನಿತ್ಯ ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಕುಮಾರಸ್ವಾಮಿ ಆರೋಗ್ಯ‌ ಏನಾಗುತ್ತದೋ‌ ಅನ್ನೋ ಆತಂಕ‌ವಿದೆ.  ಆದರೆ ಅವರ ಕಾರ್ಯ ವೈಖರಿ ಮೆಚ್ಚಿಕೊಂಡಿದ್ದೇನೆ ಎಂದರು.