Asianet Suvarna News Asianet Suvarna News

ಮನೆಯಲ್ಲಿ ಶೌಚಾಲಯ ಹೊಂದಿರದ 600 ಸರ್ಕಾರಿ ನೌಕರರ ವೇತನಕ್ಕೆ ಬ್ರೇಕ್‌

ಬಯಲು ಶೌಚ ಮುಕ್ತವನ್ನಾಗಿ ರಾಷ್ಟ್ರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯನ್ನೇ ಜಾರಿಗೊಳಿಸಿದೆ. ಆದಾಗ್ಯೂ, ಜಮ್ಮು-ಕಾಶ್ಮೀರದ ರಾಜ್ಯ ಸರ್ಕಾರದ ಸುಮಾರು 600 ಮಂದಿ ಸಿಬ್ಬಂದಿ ನಿವಾಸಗಳಲ್ಲೇ ಶೌಚಾಲಯ ಇಲ್ಲದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

No Toilets At Home Equals No Salaries

ಜಮ್ಮು: ಬಯಲು ಶೌಚ ಮುಕ್ತವನ್ನಾಗಿ ರಾಷ್ಟ್ರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯನ್ನೇ ಜಾರಿಗೊಳಿಸಿದೆ.

ಆದಾಗ್ಯೂ, ಜಮ್ಮು-ಕಾಶ್ಮೀರದ ರಾಜ್ಯ ಸರ್ಕಾರದ ಸುಮಾರು 600 ಮಂದಿ ಸಿಬ್ಬಂದಿ ನಿವಾಸಗಳಲ್ಲೇ ಶೌಚಾಲಯ ಇಲ್ಲದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಹೀಗಾಗಿ ಈ ಸಿಬ್ಬಂದಿಗಳ ತಿಂಗಳ ವೇತನವನ್ನೇ ತಡೆಹಿಡಿಯುವಂತೆ ಜಿಲ್ಲಾಡಳಿತ ಆದೇಶಿಸಿದೆ.

ರಾಜ್ಯ ಸರ್ಕಾರದ 616 ನೌಕರರ ನಿವಾಸಗಳಲ್ಲಿ ಶೌಚಾಲಯಗಳೇ ಇಲ್ಲದಿರುವ ಬಗ್ಗೆ ಜಿಲ್ಲಾಭಿವೃದ್ಧಿ ಸಹಾಯಕ ಆಯುಕ್ತರು ನೀಡಿದ ವರದಿ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಜಿಲ್ಲಾಭಿವೃದ್ಧಿ ಆಯುಕ್ತ ಅಂಗ್ರೇಜ್‌ ಸಿಂಗ್‌ ರಾಜಾ, ಈ ಸಿಬ್ಬಂದಿಗಳ ವೇತನವನ್ನು ತಡೆಹಿಡಿಯುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios