ಮಲ್ಟಿಪ್ಲೆಕ್ಸ್ ಗಳಲ್ಲಿ ಎಂಆರ್ ಪಿಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 10:51 AM IST
No Maximum Price In Telangana Multiplex
Highlights

ಮಲ್ಟಿಪ್ಲೆಕ್ಸ್ ಮತ್ತು ಸಿನೆಮಾ ಹಾಲ್‌ಗಳಲ್ಲಿ ಬೆಲೆ ಇಳಿಕೆಗೆ ಸಂಬಂಧಿಸಿ ಕರ್ನಾಟಕದಲ್ಲಿ ಹೋರಾಟಗಳು ನಡೆಯುತ್ತಿರುವ ನಡುವೆಯೇ, ತೆಲಂಗಾಣದಲ್ಲಿ ಎಂಆರ್ ಪಿಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರದಂತೆ ಆದೇಶಿಸಲಾಗಿದೆ. 

ಹೈದರಾಬಾದ್: ಮಲ್ಟಿಪ್ಲೆಕ್ಸ್ ಮತ್ತು ಸಿನೆಮಾ ಹಾಲ್‌ಗಳಲ್ಲಿ ಬೆಲೆ ಇಳಿಕೆಗೆ ಸಂಬಂಧಿಸಿ ಕರ್ನಾಟಕದಲ್ಲಿ ಹೋರಾಟಗಳು ನಡೆಯುತ್ತಿರುವ ನಡುವೆಯೇ, ತೆಲಂಗಾಣದಲ್ಲಿ ಎಂಆರ್ ಪಿಗಿಂತ ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರದಂತೆ ಆದೇಶಿಸಲಾಗಿದೆ. 

ಗ್ರಾಹಕರಿಗೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಪ್ಯಾಕ್ ಮಾಡಲಾದ ಸರಕುಗಳನ್ನು ಮಾರಾಟ ಮಾಡಿದಲ್ಲಿ ಮಲ್ಟಿಪ್ಲೆಕ್ಸ್ ಮತ್ತು ಥಿಯೇಟರ್‌ಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ಸರ್ಕಾರ ಎಚ್ಚರಿಸಿದೆ. ಸೆ.1 ರಿಂದ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಬೆಲೆ ನಮೂದಿಸಬೇಕು ಎಂದು ಇಲಾಖೆ ಆದೇಶಿಸಿದೆ.

loader