ರಾಮನಗರ ನ್ಯಾಯಾಲಯಕ್ಕೆ ನಿತ್ಯಾನಂದ ಹಾಜರ್

Nityanand to attend Ramnagar Court
Highlights

ಅತ್ಯಾಚಾರ ಹಾಗೂ ಪುರುಷತ್ವ ಪ್ರಕರಣದ ವಿಚಾರಣೆಗಾಗಿ ಬಿಡದಿಯ ನಿತ್ಯಾನಂದ ಸ್ವಾಮಿ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣ ಸಂಬಂಧ ಎರಡನೇ ಆರೋಪಿ ಶಿವವಲ್ಲಭನೇನಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಆದೇಶಿಸಿ, ವಿಚಾರಣೆಯನ್ನು ಇದೇ ತಿಂಗಳ 14ಕ್ಕೆ ಮುಂದೂಡಿದೆ.

ರಾಮನಗರ(ಜೂ.5): ಅತ್ಯಾಚಾರ ಹಾಗೂ ಪುರುಷತ್ವ ಪ್ರಕರಣದ ವಿಚಾರಣೆಗಾಗಿ ಬಿಡದಿಯ ನಿತ್ಯಾನಂದ ಸ್ವಾಮಿ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣ ಸಂಬಂಧ ಎರಡನೇ ಆರೋಪಿ ಶಿವವಲ್ಲಭನೇನಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಆದೇಶಿಸಿ, ವಿಚಾರಣೆಯನ್ನು ಇದೇ ತಿಂಗಳ 14ಕ್ಕೆ ಮುಂದೂಡಿದೆ.

ನಿತ್ಯಾನಂದನ ಜೊತೆ ಆತನ ಶಿಷ್ಯರಾದ ಗೋಪಾಲಶೀಲಂ ರೆಡ್ಡಿ, ಧನಶೇಖರನ್, ರಾಗಿಣಿ, ಜಮುನಾರಾಣಿ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ನಿತ್ಯಾನಂದನ ಶಿಷ್ಯ ಶಿವವಲ್ಲಭನೇನಿ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಕಳೆದ ಹಲವು ವಿಚಾರಣೆಗಳಲ್ಲೂ ಕೂಡಾ ಹಾಜರಾಗದ ಹಿನ್ನೆಲೆಯಲ್ಲಿ ಶಿವವಲ್ಲಭನೇನಿ ವಿರುದ್ಧ ನ್ಯಾಯಾಧೀಶ ಗೋಪಾಲಕೃಷ್ಣ ರೈ ಜಾಮೀನು ರಹಿತ ವಾರೆಂಟ್ ಆದೇಶಿಸಿದ್ದರು. 

ಇನ್ನು ಉಳಿದ ಆರೋಪಿಗಳ ವಿರುದ್ದದ ದೋಷಾರೋಪಣೆ ಪಟ್ಟಿಯಲ್ಲಿದ್ದ ಆರೋಪ ನಿಗದಿಯನ್ನು ನ್ಯಾಯಾಧೀಶರು ಓದಿ ಹೇಳಿದರು. ಕಳೆದ ಜನವರಿ ತಿಂಗಳ 2ರಂದು ದೋಷಾರೋಪ ನಿಗದಿಗೆ ಮುಂದಾಗಿದ್ದ ವೇಳೆ ನಿತ್ಯಾನಂದ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇದೀಗ ರಾಮನಗರ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು ನಿತ್ಯಾನಂದನ ಪ್ರಕರಣವನ್ನು ಕಳೆದ ಫೆಬ್ರವರಿ 17ರಂದು ತಿರಸ್ಕರಿಸಿತ್ತು.

loader