ನವದೆಹಲಿ (ಜ. 12): ದೇಶಾದ್ಯಂತ ರಸ್ತೆ ಅಪಘಾತ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಪಘಾತಕ್ಕೆ ಕಾರಣವಾಗುವ ರಸ್ತೆಗಳನ್ನು ವೈಜ್ಞಾನಿಕವಾಗಿ ದುರಸ್ತಿಗೆ 20 ಸಾವಿರ ಕೋಟಿಗಿಂತ ಹೆಚ್ಚು ರು. ವೆಚ್ಚ ಮಾಡುತ್ತಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ನಿಸಾನ್‌ ಇಂಡಿಯಾ ಮತ್ತು ಸೇವ್‌ ಲೈಫ್‌ ಫೌಂಡೇಷನ್‌ನ ಸಂಶೋಧನಾ ವರದಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗಡ್ಕರಿ ಅವರು, ‘ದೇಶದಲ್ಲಿ ಪ್ರತೀ ವರ್ಷವೂ ರಸ್ತೆ ಅಪಘಾತಕ್ಕೆ 1ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಇದರ ತಡೆಯುವುದು ನನ್ನ ಸಚಿವಾಲಯದ ಮೊದಲ ಆದ್ಯತೆಯಾಗಿದೆ,’ ಎಂದು ಹೇಳಿದರು. ರಸ್ತೆ ಅಪಘಾತಕ್ಕೆ ಕಾರಣವಾಗುವ ಕಪ್ಪು ಸ್ಪಾಟ್‌ಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಅವುಗಳ ಸರಿಪಡಿಸುವಿಕೆಗಾಗಿ 20000 ಕೋಟಿಗಿಂತ ಹೆಚ್ಚು ರು. ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.