Asianet Suvarna News Asianet Suvarna News

ಖಾಸಗೀಕರಣವಾಯ್ತು ಹಲವು ಕ್ಷೇತ್ರ, ನಟಿಯರ ವಿವಾದಿತ ಟಾಪ್‌ಲೆಸ್ ಪಾತ್ರ; ಮೇ.16ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಇಂದು 23 ಹೊಸ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಮೇ.18ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.  ಇತ್ತ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ ಕೇಂದ್ರ,  ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಟಾಪ್ ಲೆಸ್ ಪಾತ್ರ ಮಾಡಿ ವಿದಾಕ್ಕೆ ಗುರಿಯಾದ ನಟಿಯರು, ಮಂಗಳ ಮೇಲೆ ಕೊರೋನಾ ಲಸಿಕ ಯಶಸ್ವಿ ಪ್ರಯೋಗ ಸೇರಿದಂತೆ ಮೇ.16ರ ಟಾಪ್ 10 ಸುದ್ದಿ ಇಲ್ಲಿವೆ.

Nirmala Sithraman to sandalwood-actress top 10 news of may 16
Author
Bengaluru, First Published May 16, 2020, 6:43 PM IST
  • Facebook
  • Twitter
  • Whatsapp

ಇಂದು ರಾಜ್ಯದಲ್ಲಿ 23 ಪಾಸಿಟೀವ್ ಕೇಸ್; ಬೆಂಗಳೂರಲ್ಲಿ 14 ಕೇಸ್ ಪತ್ತೆ...


ರಾಜ್ಯದಲ್ಲಿ ಇಂದು 23 ಮಂದಿಗೆ ಪಾಸಿಟೀವ್ ಬಂದಿದೆ. ಸೋಂಕಿತರ ಸಂಖ್ಯೆ 1079 ಕ್ಕೆ ಏರಿಕೆಯಾಗಿದೆ. ಧಾರವಾಡ, ಬಾಗಲಕೋಟೆ, ಬಳ್ಳಾರಿ, ಉಡುಪಿಯಲ್ಲಿ ಒಂದೊಂದು ಕೇಸ್ ಪತ್ತೆಯಾದರೆ, ಬೆಂಗಳೂರಿನಲ್ಲಿ 14 ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ ಹೌಸ್‌ ಕೀಪರ್‌ನಿಂದ 11 ಮಂದಿಗೆ ಸೋಂಕು ತಗುಲಿದೆ. ಎಲ್ಲೆಲ್ಲಿ, ಹೇಗೆಲ್ಲಾ ಸೋಂಕು ತಗುಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!...

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ 20  ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ್ದಾರೆ.  ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣ ಹಾಗೂ ಖಾಸಗೀ ಸಹಭಾಗಿತ್ವದ ಮೂಲಕ ಹೊಸ ಹೆಜ್ಜೆ ಇಡಲು ಕೇಂದ್ರ ನಿರ್ಧರಿಸಿದೆ. 

ನಾವು ಮೋದಿಯನ್ನ ಕೊಲ್ಲುತ್ತೇವೆ, 6 ವರ್ಷ ಬಾಲಕನ ಬಾಯಲ್ಲಿ ಇದೆಂತಾ ಮಾತು!.

 ಕೊರೋನಾ ಸೋಲಿಸಿ ಆಸ್ಪತ್ರೆಯಿಂದ ತನ್ನ ಕುಟುಂಬ ಸದಸ್ಯರೊಂದಿಗೆ ಬಿಡುಗಡೆ ಪಡೆದ 6 ವರ್ಷದ ಪುಟ್ಟ ಬಾಲಕನೊಬ್ಬ  ಪ್ರಧಾನಿ ಮೋದಿಯನ್ನ ನಾವು ಕೊಲ್ಲುತ್ತೇವೆ ಎನ್ನುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಸದ್ಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ಈತನ ಮನಸ್ಸಲ್ಲಿ ಇಂತಹ ವಿಷ ಹಾಕಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಮೇ 18 ರಿಂದ ಬಿಎಂಟಿಸಿ ಸಂಚಾರ ಸಾಧ್ಯತೆ; ಮೆಡಿಕಲ್ ಸರ್ಟಿಫಿಕೇಟ್‌ಗಾಗಿ ಮುಗಿಬಿದ್ದ ಸಿಬ್ಬಂದಿ!

ಮೇ 17 ರ ನಂತರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಎಲ್ಲಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಆ ಮೂಲಕ ಮೇ 18 ರಂದಿ ಬಿಎಂಟಿಸಿ ಓಡಾಡುವುದು ಪಕ್ಕಾ ಎಂಬ ಸೂಚನೆ ಕೊಟ್ಟಂತಾಗಿದೆ. ವೈದ್ಯಕೀಯ ಪ್ರಮಾಣ ಪತ್ರ ತರುವಂತೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದ್ದು ಪ್ರಮಾಣ ಪತ್ರಕ್ಕಾಗಿ ಸಿಬ್ಬಂದಿಗಳು ಮುಗಿ ಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. 

ದ್ವಿತೀಯ PUC ಇಂಗ್ಲೀಷ್ ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟ

ಈಗಾಗಲೇ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದೀಗ ಕೆಲವರು ಅಲ್ಲಲ್ಲೇ ಲಾಕ್‌ ಆಗಿದ್ದು, ಇನ್ನೂ ಇಂಗ್ಲೀಷ್ ಪರೀಕ್ಷೆ ಮುಗಿದಿಲ್ಲ ಎನ್ನುವ ಟೆನ್ಷನ್‌ನಲ್ಲಿದ್ದಾರೆ. ಹೀಗಾಗಿ ಅವರ ಗೊಂದಲಕ್ಕೆ ತೆರೆ ಎಳೆಯುವ ಕೆಲಸಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿ ಮುಂದಾಗಿದೆ.

ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವ ಪಂದ್ಯವೂ ಉಭಯ ದೇಶದ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಅದರಲ್ಲೂ 2010ರ ಏಷ್ಯಾಕಪ್ ಟೂರ್ನಿಯ 4ನೇ ಪಂದ್ಯ ಅತ್ಯಂತ ರೋಚಕ ಪಂದ್ಯ ಮಾತ್ರವಲ್ಲ, ಸ್ಲೆಡ್ಜಿಂಗ್, ಮೈದಾನದಲ್ಲೇ ಜಗಳ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಹರ್ಭಜನ್ ಸಿಂಗ್ ವಿರಾವೇಶದಿಂದ ಭಾರತ ತಂಡ ಪಾಕಿಸ್ತಾನ ಮಣಿಸಿತ್ತು. ಈ ಪಂದ್ಯದಲ್ಲಿ ಭಜ್ಜಿ ಹಾಗೂ ಪಾಕ್ ವೇಗಿ ಶೋಯಿಬ್ ಅಕ್ತರ್ ನಡುವೆ ದೊಡ್ಡ ಜಗಳವೇ ನಡೆದು ಹೋಗಿತ್ತು. ಈ ಘಟನೆ ಕುರಿತು ಶೋಯೆಬ್ ಅಕ್ತರ್ ವಿವರಿಸಿದ್ದಾರೆ.

ಮುಗಿಯದ ಸನ್ನಿ ಬಗೆಗಿನ ಕೌತುಕ, ದ್ವಿಲಿಂಗಿಯಂತೆ ಇವರು!?

ಬಾಲಿವುಡ್‌ ನಟಿ ಹಾಗೂ ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಸಿನಿಮಾ ಜಗತ್ತಿನಲ್ಲಿ ಫುಲ್‌ ಫೇಮಸ್‌. ಯುವಕರನ್ನು ಫ್ಯಾಂಟಸಿ ಜಗತ್ತಿಗೆ ಕಳುಹಿಸಲು ಸನ್ನಿ ಲಿಯೋನ್ ಎಂಬ ಹೆಸರು ಸಾಕು.ನೀಲಿ ಚಿತ್ರ ತಾರೆಯಾಗಿಯೇ ಅಭಿಮಾನಿಗಳನ್ನು ಗಳಿಸಿದ್ದ ಸನ್ನಿ, ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದೀಗ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ ಸನ್ನಿ. ಸನ್ನಿ ಲಿಯೋನ್‌ ಬೈಸೆಕ್ಸ್‌ಯುಲ್‌ ಎಂದು ಒಂದು ವೆಬ್ ಸೈಟ್‌ ವರದಿ ಮಾಡಿದೆ. ಇಂಟರ್‌ನೆಟ್‌ನಲ್ಲಿ  ವರದಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರ ಕುತೂಹಲ ಕೆರಳಿಸಿದೆ.

ಪಾದರಾಯನಪುರ ಪುಂಡಾಟಕ್ಕೆ ಬಿಗ್ ಟ್ವಿಸ್ಟ್‌; ಸಿಕ್ಕಿದೆ ಎಕ್ಸ್‌ಕ್ಲೂಸಿವ್ ಆಡಿಯೋ..!

ಪಾದರಾಯನಪುರ ಗಲಾಟೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪಾದರಾಯನ ಪುರ ಗಲಾಟೆ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೇ ಸುವರ್ಣ ನ್ಯೂಸ್. ಪುಂಡಾಟದ ಪಿನ್ ಟು ಪಿನ್ ವರದಿಯನ್ನು ನೀಡಿತ್ತು. ವಾರಿಯರ್ಸ್ ಮೇಲೆ ಹಲ್ಲೆ ಮಾಡಲು ಮೊದಲೇ ಪ್ರಿ ಪ್ಲಾನ್ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಎಕ್ಸ್‌ಕ್ಲೂಸಿವ್ ಆಡಿಯೋ ಸಿಕ್ಕಿದ್ದು, ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ!

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕಂಡುಹಿಡಿಯುತ್ತಿರುವ ಕೊರೋನಾ ಲಸಿಕೆ ಮಂಗಗಳ ಮೇಲಿನ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಛಡಾಕ್ಸ್‌1 ಹೆಸರಿನ ಈ ಲಸಿಕೆಯನ್ನು 6 ಮಂಗಗಳಿಗೆ ನೀಡಿ, ನಂತರ ಅವುಗಳಿಗೆ ಕೊರೋನಾ ವೈರಸ್‌ ತಗಲುವಂತೆ ಮಾಡಲಾಗಿತ್ತು. ಆಗ ಅವುಗಳ ರೋಗನಿರೋಧಕ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಿ, ವೈರಸ್‌ನಿಂದ ಅವುಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ನಟಿಯರ ಟಾಪ್‌ಲೆಸ್‌ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?

ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ Bold and Beautiful ನಟಿಯರು ಇದ್ದಾರೆ. ಅವರಲ್ಲಿ ಕೆಲವರು ಪಾತ್ರಕ್ಕಾಗಿ ಟಾಪ್‌ಲೆಸ್‌ ಆಗಿ ವಿವಾದದಲ್ಲಿ ಸಿಲುಕಿಕೊಂಡವರೂ ಸೇರಿದ್ದಾರೆ.

Follow Us:
Download App:
  • android
  • ios