ನವದೆಹಲಿ[ಜ.28]: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಮಿಕೇಶ್ ಸಿಂಗ್ ಸುಪ್ರೀಂ ಕೋರ್ಟ್ ನಲ್ಲಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮಂಗಳವಾರ ನ್ಯಾಯಾಲಯದಲ್ಲಿ ರಾಷ್ಟ್ರಪತಿ ಕೋವಿಂದ್ ವಜಾಗೊಳಿಸಿದ ಕ್ಷಮಾದಾನ ಅರ್ಜಿ ವಿರೋಧಿಸಿ ಸಲ್ಲಿಸಿದ್ದ ಮನವಿ ವಿಚಾರಣೆ ವೇಳೆ ಜೈಲಿನಲ್ಲಿ ಸಾವಿಗೀಡಾಗಿದ್ದ ಆರೋಪಿ[ರಾಮ್ ಸಿಂಗ್]ಯನ್ನು ಹತ್ಯೆಗೈಯ್ಯಲಾಗಿತ್ತು ಎಂದಿದ್ದಾರೆ.

ರ್ಜಿ ವಿಚಾರಣೆ ವೇಳೆ ಮುಕೇಶ್ ಸಿಂಗ್ ವಕೀಲ ಅಂಜನಾ ಪ್ರಕಾಶ್ ಜೈಲಿನಲ್ಲಿ ಸಾವಿಗೀಡಾಗಿದ್ದ ಆರೋಪಿ ಕುರಿತು ಉಲ್ಲೇಖಿಸಿದ್ದಾರೆ. ಈ ವೇಳೆ ಮುಕೇಶ್ ಮನವಿ ಓದಿದ ವಕೀಲ ಪ್ರಕಾಶ್ 'ಆರೋಪಿಗಳಲ್ಲಿ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ವಾಸ್ತವವಾಗಿ ಅದೊಂದು ಹತ್ಯೆಯಾಗಿದೆ. ಆದರೆ ವರ್ಷಾನುಗಟ್ಟಲೇ ಈ ವಿಚಾರವ್ನನು ಮುಚ್ಚಿಡಲಾಗಿದೆ' ಎಂದಿದ್ದಾರೆ

ಖತರ್ನಾಕ್ ಕಿರಾತಕರು: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಮೊರೆ ಹೋದರು!

ಇಷ್ಟೇ ಅಲ್ಲದೇ ತನ್ನ ಕಕ್ಷೀದಾರ ಮುಕೇಶ್ ಮೇಲೆ ಲೈಂಗಿಕ ಶೋಷಣೆ ನಡೆಸಲಾಗಿದೆ. ಆತ ಜೈಲಿನಲ್ಲಿ ಪ್ರತಿದಿನ ಸಾಯುತ್ತಿದ್ದಾನೆ ಎಂದಿದ್ದಾರೆ.

ಯಾರು ಈ ರಾಮ್ ಸಿಂಗ್?

32 ವರ್ಷ ವಯಸ್ಸಿನ ರಾಮ್ ಸಿಂಗ್ ವೃತ್ತಿಯಲ್ಲಿ ಡ್ರೈವರ್ ಆಗಿದ್ದ. ಯಾವ ಬಸ್ ನಲ್ಲಿ ನಿರ್ಭಯಾ ಅತ್ಯಾಚಾರ ನಡೆದಿತ್ತೋ, ಆ ಬಸ್ ರಾಮ್ ಸಿಂಗ್ ಚಲಾಯಿಸಿದ್ದ. ಆತ ಈ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಯಾಗಿದ್ದ. ಆತ ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಆಕೆಯ ಸ್ನೇಹಿತನನ್ನು ರಾಡ್ ನಿಂದ ಹೊಡೆದಿದ್ದ. ಘಟನೆ ನಡೆದ ಕೆಲವೇ ತಾಸಿನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗುವುದಕ್ಕೂ ಮೊದಲೇ ಆತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. 

ಮತ್ತೆ ಕೋರ್ಟ್‌ಗೆ ಹೋದ ಕಿರಾತಕರು: ಸಾವು ಮುಂದೂಡುವುದು ಎಲ್ಲಿಯ ತನಕ?

2012ರ ಡಿಸೆಂಬರ್ 16ರಂದು ನಿರ್ಭಯಾ ಅತ್ಯಾಚಾರ ನಡೆದಿದ್ದರೆ, ರಾಮ್ ಸಿಂಗ್ 2013ರ ಮಾರ್ಚ್ 11ರಂದು ಜೈಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.