ಮದುವೆಯಾಗಲು ಒತ್ತಾಯಿಸಿ ಮಾವನಿಂದಲೇ ಅತ್ಯಾಚಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 2:58 PM IST
Nikah Halala Horror Woman Gang Raped By Father In Law
Highlights

ಮೊರಾದಾಬಾದ್ ನಲ್ಲಿ ನಿಖಾಹ್ ಹಲಾಲ್ ಪ್ರಕರಣವೊಂದು ನಡೆದಿದ್ದು , ಮದುವೆಯಾಗಲು ಒತ್ತಾಯಿಸಿ ಸ್ವತಃ ಮಾವ, ಗಂಡ ಪಾದ್ರಿಗಳಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. 

ಮೊರದಾಬಾದ್ :  ಮೊರದಾಬಾದ್ ನಲ್ಲಿ ಗಂಡನ ತಂದೆಯನ್ನು ಮದುವೆಯಾಗಲು ಒತ್ತಾಯಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದ ಘಟನೆ ಬೆಳಕಿಗೆ ಬಂದಿದೆ. 

 ಇಬ್ಬರು ಪಾದ್ರಿಗಳು ಗಂಡ ಹಾಗೂ ಮಾವನಿಂದ ಮಹಿಳೆ ಮೇಲೆ ಮೇಲೆ ಅತ್ಯಾಚಾರ ನಡೆದಿದೆ. ಈ ಸಂಬಂಧ ಇದೀಗ ಐವರ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡಲಾಗಿದೆ. 

ಪ್ರೇಮ್ ಪ್ರಕಾಶ್ ಬರೇಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಮೊರದಾಬಾದ್  ಈ ಮಹಿಳೆಗೆ  2014ರಲ್ಲಿ ವಿವಾಹ ಮಾಡಲಾಗಿತ್ತು. ಆದರೆ ಅದಾಗಿ ಒಂದು ವರ್ಷದ ಬಳಿಕ ಮಹಿಳೆಯನ್ನು  ಆಕೆಯ ಮಾವನ ಮನೆಯಿಂದ ಹೊರ ಹಾಕಲಾಯಿತು.  ಬಳಿಕ ಮಹಿಳೆ ಪ್ರಕರಣ ದಾಖಲು ಮಾಡಿದ್ದು , ಅದಾದ ನಂತರ ಸಂದಾನ ಮಾಡಿ ಆಕೆಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಲಾಗಿತ್ತು. 

ಈ ಎಲ್ಲಾ ಬೆಳವಣಿಗೆಗಳಿಂದ ಮಹಿಳೆ ನಿಖಾಹ್ ಹಲಾಲ್ ಮಾಡಿಕೊಳ್ಳಲು ಆಕೆಗೆ ಒತ್ತಡ ಹೇರಲಾಗಿದ್ದು ಇದರಿಂದ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

loader