ಅಲ್‌ಖೈದಾ ಉಗ್ರರ ಬಂಧನ to ವಿಳಾಸ ಬದಲಿಸಿದ ರಶ್ಮಿಕಾ ಮಂದಣ್ಣ; ಸೆ.20ರ ಟಾಪ್ 10 ಸುದ್ದಿ!
ಬೆಂಗಳೂರು ದಾಳಿಗೆ ಸಂಚು ರೂಪಿಸಿದ್ದ 9 ಅಲ್‌ಖೈದಾ ಉಗ್ರರ ಬಂಧಿಸಲಾಗಿದೆ. ಕೊರೋನಾ ಅಬ್ಬರ ಮುಂದುವರಿದಿದ್ದು, ಸೋಂಕಿತ ರೋಗಿಗೆ 9 ಲಕ್ಷ ಬಿಲ್ ನೀಡಿ 1 ರೂ. ಡಿಸ್ಕೌಂಟ್ ನೀಡಿದ ಘಟನೆ ನಡೆದಿದೆ. ಐಪಿಎಲ್ ಟೂರ್ನಿಯಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನಡೆಸಲಿದೆ. ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ ರಶ್ಮಿಕಾ, ರಂಗೇರಿದ ಶಿರಾ ಬೈ ಎಲೆಕ್ಷನ್ ಸೇರಿದಂತೆ ಸೆಪ್ಟೆಂಬರ್ 20 ರ ಟಾಪ್ 10 ಸುದ್ದಿ
ಬೆಂಗಳೂರು ದಾಳಿಗೆ ಸಂಚು: 9 ಅಲ್‌ಖೈದಾ ಉಗ್ರರ ಬಂಧನ!...
ಬೆಂಗಳೂರು, ದೆಹಲಿ, ಕೇರಳ ಸೇರಿದಂತೆ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿ, ಅಮಾಯಕರನ್ನು ಕೊಲ್ಲುವ ಮೂಲಕ ತನ್ನ ಅಸ್ತಿತ್ವ ನಿರೂಪಿಸಲು ಪ್ರಯತ್ನಿಸುತ್ತಿದ್ದ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾಕ್ಕೆ ಭಾರತೀಯ ತನಿಖಾ ಸಂಸ್ಥೆಗಳು ಭರ್ಜರಿ ಹೊಡೆತ ಕೊಟ್ಟಿವೆ.
ಎಚ್.ಡಿ.ದೇವೇಗೌಡರಿಂದ ಪ್ರಮಾಣ ವಚನ ಸ್ವೀಕಾರ...
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಸಂಸತ್‌ನ ಮುಂಗಾರು ಅಧಿವೇಶನ ಭಾನುವಾರ ನಡೆಯುತ್ತಿದೆ. ಶನಿವಾರ ರಾತ್ರಿ ದೆಹಲಿಗೆ ತೆರಳಿದ ದೇವೇಗೌಡ ಅವರು ಇಂದು ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಚಿಕ್ಕಮಗಳೂರು; ಕೊರೋನಾ ರೋಗಿಗೆ 9 ಲಕ್ಷ ಬಿಲ್ ನೀಡಿ 1 ರೂ. ಡಿಸ್ಕೌಂಟ್!...
ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದರೆ ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ಬಿಲ್ ಮಾಡುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಕೊರೋನಾಕ್ಕಿಂತ ಆಸ್ಪತ್ರೆ ಬಿಲ್ ಗೆ ಜನ ಭಯಬೀಳುವಂತೆ ಆಗಿದೆ.. ಕೊನೆಗೆ ಕೊಟ್ಟಿರುವುದು ಒಂದು ರೂಪಾಯಿ ಡಿಸ್ಕೌಂಟ್!
IPL 2020: ಕನ್ನಡಿಗರಿಂದ ತುಂಬಿರುವ ಪಂಜಾಬ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು!...
ಐಪಿಎಲ್ 13ನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದ್ದು, ಭಾನುವಾರ ಟೂರ್ನಿಯ 2ನೇ ಪಂದ್ಯದಲ್ಲಿ ಕನ್ನಡಿಗರಿಂದಲೇ ಕೂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಯುವ ಹಾಗೂ ಅನುಭ ಆಟಗಾರರೊಂದಿಗೆ ಸಮತೋಲನ ಕಂಡುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ.
ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ; ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಕರೆ...
ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ ರಶ್ಮಿಕಾ; ಕರ್ನಾಟಕ ತೊರೆದರೇ?...
ವಿಳಾಸ ಬದಲಾಯಿಸಿದ ರಶ್ಮಿಕಾ ಮಂದಣ್ಣ. ಐಷಾರಾಮಿ ಮನೆ ಹೊಂದಿದ್ದರೂ ದುಬಾರಿ ಮನೆ ಖರೀದಿಸಲು ಕಾರಣವೇನು?
ಚಿನ್ನ ಖರೀದಿಗೆ ಮುನ್ನ ಇವತ್ತಿನ ದರ ಒಮ್ಮೆ ನೋಡಿ, ಇಲ್ಲಿದೆ ಸೆ. 20ರ ಗೋಲ್ಡ್ ರೇಟ್!...
ರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ತಾಮ್ರದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.
ರಂಗೇರಿದ ಶಿರಾ ಬೈ ಎಲೆಕ್ಷನ್: ಅಖಾಡಕ್ಕಿಳಿಯಲು ಜೋಡೆತ್ತು ರೆಡಿ..!
ಜೆಡಿಎಸ್‌ನ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಆದ್ರೆ, ಇನನ್ಊ ದಿನಾಂಕ ನಿಗದಿಯಾಗಿಲ್ಲ. ಆಗಲೇ ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಈ ಚುನಾವಣೆಯಲ್ಲೂ ಜೋಡೆತ್ತುಗಳು ಹುಟ್ಟಿಕೊಂಡಿವೆ. ಈ ಹಿಂದಿನ ಹಳೆ ದ್ವೇಷವನ್ನು ಮರೆತು ಒಂದಾಗಿ ಅಖಾಡಕ್ಕಿಳಿದಿವೆ.
ಅನುದಾನಿತ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ!...
ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ರಾರಯಂಕ್ ಗಗನ ಕುಸುಮ ಎನಿಸಿವೆ. ಈ ಕಳಂಕ ತೊಳೆಯಲು ಮುತುವರ್ಜಿ ವಹಿಸಬೇಕಾದ ಧಾರವಾಡದ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯವೇ ಗುಣಮಟ್ಟದ ಶಿಕ್ಷಣಕ್ಕೆ ಕಂಟಕವಾಗಿ ಪರಿಣಮಿಸಿದೆ!
ನಿಖಿಲ್ ಕುಮಾರಸ್ವಾಮಿ -ರೇವತಿ candid ವಿಡಿಯೋ; ನಾಚಿ ಬೆರೆಗಾದ ಜೋಡಿ!...
ಪತ್ನಿ ರೇವತಿ ಜೊತೆ ಕ್ಯಾಂಡಿಡ್ ವಿಡಿಯೋ ಶೇರ್ ಮಾಡಿಕೊಂಡ ನಿಖಿಲ್. ಇಬ್ಬರನ್ನು ಸಾಂಪ್ರದಾಯಿಕೆ ಉಡುಗೆಯಲ್ಲಿ ಕಂಡು ಕೊಂಡಾಡಿದ ಅಭಿಮಾನಿಗಳು.