ಅಪಹೃತ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲರು!...

ಛತ್ತೀಸ್‌ಗಢದ ಬಸ್ತರ್‌ ವಲಯದಲ್ಲಿ ಕಳೆದ ಶನಿವಾರ ನಕ್ಸಲರ ಜತೆಗಿನ ಕಾಳಗದ ವೇಳೆ ಅಪರಣಗೊಂಡಿರುವ ಸಿಆರ್‌ಪಿಎಫ್‌ ಯೋಧ ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರ ಛಾಯಾಚಿತ್ರವನ್ನು ಮಾವೋವಾದಿಗಳು ಬುಧವಾರ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇವರ ಸುರಕ್ಷಿತ ಬಿಡುಗಡೆಗೆ ಮಧ್ಯಸ್ಥಿಕೆದಾರರನ್ನು ನೇಮಿಸಿ ಅವರ ಹೆಸರು ಘೋಷಿಸಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಕೊರೋನಾ ಮತ್ತೆ ದಾಖಲೆ ಕೇಸ್‌: ಒಂದೇ ದಿನ ದೇಶದಲ್ಲಿ 1.15 ಲಕ್ಷ ಪ್ರಕರಣ, 630 ಜನರ ಸಾವು!...

ಕೊರೋನಾ 2ನೇ ಅಲೆಯ ಪ್ರತಾಪ ಮುಂದುವರೆದಿದ್ದು, ಬುಧವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 1.15 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಯಾವುದೇ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಜೊತೆಗೆ ಮಂಗಳವಾರ ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಕೇಸು ದಾಖಲಾಗಿದ್ದು ಕೂಡಾ ಭಾರತದಲ್ಲೇ ಎಂಬುದು ವಿಶೇಷ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.28 ಕೋಟಿಗೆ ತಲುಪಿದೆ.

ಟ್ವೆರ್ಕಿಂಗ್ ಡ್ಯಾನ್ಸ್ ವಿಡಿಯೋ ವೈರಲ್; ಕಳಚಿತು ಮಿಸ್ ಪಪುವಾ ನ್ಯೂಗಿನಿಯ ಕಿರೀಟ!...

ಲ್ಯೂಸಿ ಮೈನೋ..ಪಪುವಾ ನ್ಯೂಗಿಯಾ ಪುಟ್ಟ ದೇಶದ ಸುಂದರಿ ಪಟ್ಟ ಬಾಚಿಕೊಂಡ ಚೆಲುವೆ. 2019ರಲ್ಲಿ ಮಿಸ್ ಪಪುವಾ ನ್ಯೂಗಿನಿಯ ಕಿರೀಟ ಗೆದ್ದ ಲ್ಯೂಸಿ ಮೈನೋ ಇದೀಗ ಸಣ್ಣ ತಪ್ಪಿನಿಂದ ಮಿಸ್ ಕಿರೀಟವನ್ನೇ ಕಳೆದುಕೊಂಡಿದ್ದಾರೆ.

ಇದು ಧೋನಿಯ ಕೊನೆಯ IPL 2021 ಟೂರ್ನಿ? ಕುತೂಹಲಕ್ಕೆಉತ್ತರ ನೀಡಿದ CSK!...

IPL 2021 ಟೂರ್ನಿ ಶುಕ್ರವಾರ ಶುಭಾರಂಭಗೊಳ್ಳಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಇದೀಗ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಕಳೆದ ಕೆಲ ವರ್ಷಗಳಿಂದ ಎದುರಿಸುತ್ತಿರುವ ಪ್ರಶ್ನೆ ಮತ್ತೆ ಬಂದಿದೆ. ಆದರೆ ಈ ಬಾರಿ ಸಿಎಸ್‌ಕೆ ಸಿಇಒ ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯೇ ? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ...

ಮದುವೆಯಾದ ಹುಡುಗ ಕೈ ಕೊಟ್ಟಿರುವ ಕಾರಣ ಬಿಗ್ ಬಾಸ್ ಸ್ಪರ್ಧಿ ಚೈತ್ರಾಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಂದೆ ನಾರಾಯಣಪ್ಪ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ.

ದಳಪತಿ 65: ವಿಜಯ್ ಜೊತೆ ನಟಿಸೋಕೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಪೂಜಾ ?...

ವಿಜಯ್ ಜೊತೆ ನಟಿಸೋಕೆ ಭಾರೀ ಸಂಭಾವನೆ ಕೇಳಿದ ಪೂಜಾ | ಟಾಪ್ ನಟಿಯರ ಲಿಸ್ಟ್‌ನಲ್ಲಿರೋ ಬಹುಭಾಷಾ ನಟಿಗೆ ಹೆಚ್ಚಿದ ಡಿಮ್ಯಾಂಡ್

ಅಂಬಾನಿ ಸಹೋದರರಿಗೆ 25 ಕೋಟಿ ರು. ದಂಡ!...

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾಲಿಕತ್ವವನ್ನು ವಿಭಜಿಸುವ ವೇಳೆ ಷೇರು ಪಾಲುದಾರಿಕೆಯ ಬಗ್ಗೆ ತಪ್ಪು ಮಾಹಿತಿ| ಅಂಬಾನಿ ಸಹೋದರರಿಗೆ 25 ಕೋಟಿ ರು. ದಂಡ!

ಬಿಜೆಪಿಗನ ಕಾರಿನ ಮೇಲೆ ಪೊಲೀಸರ ಫೈರಿಂಗ್: ಹತ್ಯೆಗೆ ಯತ್ನ ಎಂದ ನಾಯಕ! ...

ಪೊಲೀಸರ ಸ್ಪೆಷಲ್ ಆಪರೇಷನ್ ತಂಡ ಬುಧವಾರ ರಾತ್ರಿ ಬಿಜೆಪಿ ನಾಯಕನೊಬ್ಬನ ಕಾರಿನ ಮೇಲೆ ಫೈರಿಂಗ್ ನಡೆಸಿದ್ದು, ಈ ವೇಳೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಪೊಲೀಸರು ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆಂಬ ಆರೋಪ ಮಾಡಿದ್ದಾರೆ.

ತಮಿಳುನಾಡು ಚುನಾವಣೆ: ತನ್ನ ಮತ ಯಾರಿಗೆಂದು ಬಹಿರಂಗಪಡಿಸಿದ ಸದ್ಗುರು!...

ವಿಧಾನಸಭಾ ಕ್ಷೇತ್ರವಿರುವ ತಮಿಳುನಾಡಿನ ಚುನಾವಣೆ ಏಪ್ರಿಲ್ 6 ರಂದು ನಡೆದಿದೆ. ಈ ಚುನಾವಣೆಯಲ್ಲಿ ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಕೂಡಾ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಜನ ಸಾಮಾನ್ಯರಲ್ಲಿ ಮತ ಚಲಾಯಿಸುವಂತೆ ಮನವಿಯನ್ನೂ ಮಾಡಿದ್ದರು.

Mi 11 ಅಲ್ಟ್ರಾ ಫೋನ್‍ ಹಿಂಬದಿಯಲ್ಲೂ ಡಿಸ್‌ಪ್ಲೇ! ಏ.23ಕ್ಕೆ ಲಾಂಚ್...

ಕಳೆದ ತಿಂಗಳು ಚೀನಾದಲ್ಲಿ ಬಿಗುಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿ ಕಂಪನಿಯ ಎಂಐ 11 ಅಲ್ಟ್ರಾ ಸ್ಮಾರ್ಟ್‌ಪೋನ್ ಏಪ್ರಿಲ್ 23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಬಗ್ಗೆ ಅಮೆಜಾನ್ ತಾಣದಲ್ಲಿ ಪ್ರತ್ಯೇಕವಾದ ಪುಟವನ್ನು ಸೃಷ್ಟಿಸಲಾಗಿದ್ದು, ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಎಂಐ 11 ಅಲ್ಟ್ರಾ  ಭಾರತದಲ್ಲಿ ಬಿಡುಗಡೆಯನ್ನು ಖಚಿತಪಡಿಸಿದಂತಾಗಿದೆ.