ಹಾಸನ : ಈಗಾಗಲೇ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಭಾರೀ ಪ್ರವಾಹದಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಆದರೆ ಇನ್ನೂ ಮೂರು ತಿಂಗಳ ಕಾಲ ಇದೇ ರೀತಿಯ ನೈಸರ್ಗಿಕ ವಿಕೋಪಗಳು ರಾಜ್ಯದಲ್ಲಿ ಮುಂದುವರಿಯಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಮುಂದಿನ ಮೂರು ತಿಂಗಳ ಕಾಲ ಮಳೆ ಹಾಗೂ ಇತರೆ ವಿಪತ್ತುಗಳು ಸಂಭವಿಸುತ್ತವೆ. ಕಾರ್ತಿಕ ಮಾಸದವರೆಗೂ ಕೂಡ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. 

ಭೂ ಕುಸಿತ ಸಂಭವಿಸುತ್ತದೆ. ಲಕ್ಷಾಂತರ ಜನರ ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.