Asianet Suvarna News Asianet Suvarna News

ನಾಸಾದ ಚಂದ್ರಯಾನಕ್ಕೆ ಜತೆಯಾಗಲಿದೆ ಬೆಂಗಳೂರಿನ ಕಂಪನಿ

ಬಾಹ್ಯಾಕಾಶ ಸಂಶೋಧನೆಯಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುವ ಬೆಂಗಳೂರು ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ. ಅಮೆರಿಕದ ನಾಸಾ (The National Aeronautics and Space Administration) ಬೆಂಗಳೂರಿನ ಸಂಸ್ಥೆಯೊಂದು ಪಾಲುದಾರಿಕೆಗೆ ಆಯ್ಕೆ ಮಾಡಿಕೊಂಡಿದೆ.

NASA picks Bengaluru company as part of its lunar expedition in 2020
Author
Bengaluru, First Published Jun 11, 2019, 10:23 PM IST

ಬೆಂಗಳೂರು[ಜೂ. 11]  ನಾಸಾದ ಮುಂದಿನ ಚಂದ್ರಯಾನ ಯೋಜನೆಗೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದಕ್ಕೆ ಕೈ ಜೋಡಿಸುವ ಅವಕಾಶ ಲಭ್ಯವಾಗಿದ್ದು ಸಂಸ್ಥೆ ಮೂನ್‌ ಲ್ಯಾಂಡರ್‌ ನೌಕೆಯನ್ನು ತಯಾರಿಸಿ ಕೊಡಲಿದೆ. 

ಯುಎಸ್‌ ಸ್ಪೇಸ್‌ ಏಜೆನ್ಸಿ ಜತೆ ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ಒಪ್ಪಂದವನ್ನು ಪಡೆದಿದ್ದು, 2020ರ ಚಂದ್ರಯಾನ ಯೋಜನೆಗೆ ಮೂನ್‌ ಲ್ಯಾಂಡರ್‌ಅನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಅವಕಾಶ ಪಡೆದಿದೆ. 

ಬಾಹ್ಯಾಕಾಶ ಟೂರ್ ಪ್ಯಾಕೇಜ್ ಕೊಟ್ಟ ನಾಸಾ

ಅಕ್ಸಿಯೋಮ್ ರಿಸರ್ಚ್ ಲ್ಯಾಬ್ಸ್ ನ ಟೀಮ್ ಇಂಡಸ್ ನಾಸಾದೊಂದಿಗೆ ಕೆಲಸ ಮಾಡಲಿದೆ. ನಾಸಾ ಹಲವು ಕಂಪನಿಗಳಿಗೆ ಆಹ್ವಾನ ನೀಡಿತ್ತು. ಆದರೆ ಅಂತಿಮವಾಗಿ ಬೆಂಗಳೂರಿನ ಕಂಪನಿ ಆಯ್ಕೆಯಾಗಿದೆ.

ಸಂಸ್ಥೆಯ ಸಂಸ್ಥಾಪಕ ರಾಹುಲ್ ನಾರಾಯಣ್ ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಟೀಮ್ ಇಂಡಸ್ ಸಂಸ್ಥೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಹಣಕಾಸು, ಮಾಧ್ಯಮ ಸೇರಿದಂತೆ ಎಲ್ಲ ವಿಭಾಗದ ಜನರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

Follow Us:
Download App:
  • android
  • ios