Asianet Suvarna News Asianet Suvarna News

ಸಾವು ಗೆದ್ದ ಪೋರಿ: ಎದೆ ಝಲ್ ಎನಿಸೋ ವಿಡಿಯೋ!

ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯಲ್ಲಿ ಅವಘಡ

ನೋಡನೋಡ್ತಿದ್ದಂತೆ ಬಾಲಕಿಗೆ ಕಾರು ಡಿಕ್ಕಿ

ಅಪಘಾತದಲ್ಲಿ 3 ವರ್ಷದ ಬಾಲಕಿ ಬಚಾವ್

ಕಾರಿನಡಿ ಸಿಲುಕಿದ್ರೂ ಪ್ರಾಣಾಪಾಯದಿಂದ ಪಾರು

ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

ಇಂಧೋರ್(ಜು.22): ಆಯಸ್ಸು ಗಟ್ಟಿಯಾಗಿದ್ರೆ ಸಾವಿನ ದವಡೆಯಿಂದ ಪಾರಾಗಬಹುದು ಅನ್ನೋದಕ್ಕೆ ಈ  ಘಟನೆಯೇ ಸಾಕ್ಷಿ. ಯಾಕಂದ್ರೆ ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯಲ್ಲಿ  ನಡೆದ ಅಪಘಾತದಲ್ಲಿ  ಬಾಲಕಿಯೋರ್ವಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ.  

ಮೂರು ವರ್ಷದ ರಿಯಾ ಎಂಬ ಬಾಲಕಿ ಪೋಷಕರೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ  ವೇಳೆ  ಕಾರು ಡಿಕ್ಕಿ  ಹೊಡೆದಿದೆ. ಆದ್ರೂ ಬಾಲಕಿ ಕಾರಿನಡಿ ಸಿಲುಕಿದ್ರೂ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ ಎನಿಸುವಂತಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..