ನವದೆಹಲಿ (ಜ. 18): ಸಂಕಷ್ಟದ ಸುಳಿಸಿಕ್ಕಿರುವ ಜೆಟ್ ಏರ್‌ವೇಸ್ನಲ್ಲಿ ಹೊಸದಾಗಿ 700 ಕೋಟಿ ರು. ಬಂಡವಾಳ ಹೂಡಲು ಹಾಗೂ ತಮ್ಮ ಪಾಲಿನ ಷೇರನ್ನು ಒಪ್ಪಿಸಲು ತಾವು ಸಿದ್ಧ. ಆದರೆ ಕಂಪನಿಯಲ್ಲಿನ ತಮ್ಮ ಪಾಲು ಶೇ.25 ಕ್ಕಿಂತ ಕೆಳಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಜೆಟ್ ಏರ್‌ವೇಸ್ ಮಾಲೀಕ ನರೇಶ್ ಗೋಯೆಲ್ ಷರತ್ತು ಒಡ್ಡಿದ್ದಾರೆ.

ಅಂಬಾನಿ, ಟಾಟಾ ತೆಕ್ಕೆಗೆ ಜೆಟ್ ಏರ್‌ವೇಸ್?

ಏರ್‌ವೇಸ್‌ಗೆ ಸಾಲ ನೀಡಿರುವ ಬ್ಯಾಂಕ್ಗಳ ಒಕ್ಕೂಟದ ನೇತೃತ್ವದ ಹೊಂದಿರುವ ಎಸ್‌ಬಿಐಗೆ ಬರೆದ ಪತ್ರದಲ್ಲಿ ಗೋಯೆಲ್ ಈ ಷರತ್ತು ಇಟ್ಟಿದ್ದಾರೆ.