Asianet Suvarna News Asianet Suvarna News

ಬಿಎಸ್‌ವೈ, ಎಚ್‌ಡಿಕೆ ಆಯ್ತು ನೆಕ್ಸ್ಟ್ ಸಿಎಂ ಈಶ್ವರಪ್ಪ..?

ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಾರಾ? ಇಂತಹದೊಂದು ಪ್ರಶ್ನೆ ಉದ್ಬವಿಸಲು ಕಾರಣವೂ ಸಹ ಇದೆ. 

Naga Sadhus Visits To Shivamogga BJP MLA KS Eshwarappa House
Author
Bengaluru, First Published Sep 23, 2018, 2:22 PM IST
  • Facebook
  • Twitter
  • Whatsapp

ಶಿವಮೊಗ್ಗ, (ಸೆ.23):  ಬಿಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಆಯ್ತು ನೆಕ್ಸ್ಟ್  ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಾರಾ? ಇಂತಹದೊಂದು ಪ್ರಶ್ನೆ ಉದ್ಬವಿಸಲು ಕಾರಣವೂ ಸಹ ಇದೆ. 

ಈ ಹಿಂದಿನ ದಿನಗಳಲ್ಲಿ ನಾಗಸಾಧುಗಳು ಭೇಟಿ ನೀಡಿದ ನಾಯಕರುಗಳು ಸಿಎಂ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು. ಕೆಲ ದಿನಗಳ ಹಿಂದೆ ನಾಗಾಸಾಧುಗಳು ಮಾಜಿ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. 

ನಾಗಾಸಾಧಗಳ ಆಶೀರ್ವಾದ ಬಳಿಕ  ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಸಿಎಂ ಕುರ್ಚಿ ಅಲಂಕರಿಸಿರುವುದು ವಿಶೇಷ. ನಾಗಾಸಾಧುಗಳ ಭೇಟಿ ನಂತರ ಯಡಿಯೂರಪ್ಪ ಮೂರು ದಿನ ಸಿಎಂ ಆಗಿದ್ದರೇ, ಕುಮಾರಸ್ವಾಮಿ ಅವರು ಸಹ ಪ್ರಸ್ತುತ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. 

Naga Sadhus Visits To Shivamogga BJP MLA KS Eshwarappa House

ಇದೀಗ ಕೆ.ಎಸ್.ಈಶ್ವರಪ್ಪ ಅವರ ಮನೆಗೆ ಇಂದು [ಭಾನುವಾರ] ನಾಗಾಸಾಧುಗಳು ಭೇಟಿ ನೀಡಿದ್ದಾರೆ. ಇದ್ರಿಂದ ಈಶ್ವರಪ್ಪ ಅವರು ಸಹ ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾರಾ ಅನ್ನೋದು ಸಹಜವಾಗಿಯೇ ಕುತೂಹಲ ಮೂಡಿಸುತ್ತೆ. 

 ಭಾನುವಾರ ಶಿವಮೊಗ್ಗದಲ್ಲಿರುವ ಕೆ.ಎಸ್.ಈಶ್ವರಪ್ಪ ಅವರ 'ಜಯಲಕ್ಷ್ಮೀ' ನಿವಾಸಕ್ಕೆ ಭೇಟಿ ನೀಡಿದ ನಾಗಾಸಾಧುಗಳು ಕೆ.ಎಸ್.ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಅವರಿಗೆ ಆಶೀರ್ವಾದ ಮಾಡಿದರು. 

Follow Us:
Download App:
  • android
  • ios