ನನಗೂ ಸ್ವಾಭಿಮಾನವಿದೆ : ಸಚಿವ ಸ್ಥಾನ ಒಲ್ಲೆ ಎಂದ ಎಂ.ಬಿ. ಪಾಟೀಲ್

ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ.ಪಾಟೀಲ್ '2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸೇರ್ಪಡೆಗೊಳ್ಳಲು ಇಷ್ಟವಿಲ್ಲ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.

ಈ ನಡುವೆ ಸಚಿವಸ್ಥಾನ ಸಿಗದ ಕಾರಣ ಹೈಕಮಾಂಡ್ ವಿರುದ್ಧ ತಿರುಗಿಬಿದ್ದಿರುವ 16 ಕಾಂಗ್ರೆಸ್ ಶಾಸಕರು ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಎಚ್.ಆಂಜನೇಯ ನಿವಾಸದಲ್ಲಿ ಸರಣಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಡಾ. ಸುಧಾಕರ್, ಎಂ.ಟಿ.ಬಿ. ನಾಗರಾಜ್, ಬಿ.ಸಿ. ಪಾಟೀಲ್, ಎಚ್.ಆಂಜನೇಯ, ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಹ್ಯಾರಿಸ್,  ರಹೀಂಖಾನ್, ರಘುಮೂರ್ತಿ, ಬಿ. ನಾರಾಯಣ್ ಭಾಗಿಯಾಗಿದ್ದಾರೆ.

Comments 0
Add Comment