ಹೈದರಾಬಾದ್[ಸೆ.26]: ನಗರದ ಜನತೆ ಇಂದು ಅಕ್ಷರಶಃ ಬೆಚ್ಚಿಬಿದ್ದಿದ್ದರು. ರಾಜೇಂದ್ರ ನಗರದಲ್ಲಿ ಪೊಲೀಸ್ ವಾಹನದ ಎದುರೇ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹಿಂತಿರುಗುತ್ತಿದ್ದಾಗ ನೂರಾರು ಜನರೆದುರೆ  ದುಷ್ಕರ್ಮಿಗಳು ರಮೇಶ್ ಎಂಬಾತನನ್ನು ಹತ್ಯೆಗೈದಿದ್ದಾರೆ. 
ಹತ್ಯೆಯಾದ ರಮೇಶ್, ಮಹೇಶ್ ಗೌಡ ಎಂಬಾತನನ್ನ ಕೊಲೆಮಾಡಿ ದೇಹವನ್ನು ಸುಟ್ಟು ದೇವಾಲಯದ ಬಳಿ ಎಸೆದು ಹೋಗಿದ್ದ.

ಈ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹಿಂತಿರುಗುತ್ತಿದ್ದಾಗ ಕೊಲೆಯಾಗಿದ್ದಾನೆ. ಕೆಲವರು ತಡೆಯಲು ಪ್ರಯತ್ನಿಸಿದರೆ, ಇನ್ನೂ ಕೆಲವರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದರು.

"