ಮುಂಬೈ : ದುಬೈ ನಲ್ಲಿ ಬಾರ್ ಡ್ಯಾನ್ಸರ್ ಆಗಿದ್ದ ಮುಂಬೈ ಮೂಲದ ಮಹಿಳೆಯೋರ್ವರು ಕೇರಳ ವ್ಯಕ್ತಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ.

2009 ರಿಂದ 2018ರವರೆಗೂ ನಿರಂತರವಾಗಿ ಅತ್ಯಾಚಾರ ಎಸಗಿದ್ದಾಗಿ ದೂರು ದಾಖಲಿಸಲಾಗಿದೆ. ಕೇರಳದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಹಿರಿಯ ಪುತ್ರ  ಬಿನಾಯ್ ವಿನೋದಿನಿ ಬಾಲಕೃಷ್ಣನ್ ವಿರುದ್ಧ ಮುಂಬೈನ ಒಶೀವಾರಾ  ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. 

ಐಪಿಸಿ ಸೆಕ್ಷನ್  376 ಮತ್ತು 376[2] [ಅತ್ಯಾಚಾರ], 420 [ವಂಚನೆ], 504 [ಅವಮಾನ], 506 [ಕ್ರಿಮಿನಲ್ ಆರೋಪ] ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ದೂರು ದಾಖಲಿಸಿದ ಮಹಿಳೆಗೆ 8 ವರ್ಷ ವಯಸ್ಸಿನ ಪುತ್ರನೂ ಇದ್ದು,ಈಕೆಗೆ ವಿವಾಹವಾಗುವುದಾಗಿ ಹೇಳಿ ಪದೇ ಪದೇ ವಂಚಿಸುತ್ತಿದ್ದ ಎನ್ನಲಾಗಿದೆ. ಅಲ್ಲದೇ ಆತನಿಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳು ಇದ್ದಾರೆ.

 ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಆದರೆ ಇನ್ನೂ ಆರೋಪಿ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿಲ್ಲವೆಂದು ಓಶಿವಾರ ಪೊಲೀಸ್ ಠಾಣೆ  ಇನ್ಸ್ ಪೆಕ್ಟರ್ ಶೈಲೇಶ್ ಪಸಲ್ವಾರ್ ಹೇಳಿದ್ದಾರೆ.