Asianet Suvarna News Asianet Suvarna News

Water Taxi : ಜನವರಿಯಿಂದ ಮುಂಬೈನಲ್ಲಿ ಆರಂಭವಾಗಲಿದೆ ವಾಟರ್ ಟ್ಯಾಕ್ಸಿ!

2022ರ ಜನವರಿಯಲ್ಲಿ ಕಾರ್ಯಾರಂಭ
ದಕ್ಷಿಣ ಮುಂಬೈ ಹಾಗೂ ನವೀ ಮುಂಬೈ ನಡುವೆ ಸಂಪರ್ಕ
ಡಿಸಿಟಿಯಿಂದ ನವೀ ಮುಂಬೈ ಪ್ರಯಾಣಕ್ಕೆ 1200 ರಿಂದ 1500 ರೂಪಾಯಿ ಟಿಕೆಟ್
 

Mumbai Water Taxi services To Begin Operations From January 2022 san
Author
Bengaluru, First Published Dec 24, 2021, 4:45 PM IST

ಮುಂಬೈ (ಡಿ. 24): ದೇಶದ ವಾಣಿಜ್ಯ ನಗರಿ ಮುಂಬೈನ (Mumbai) ಟ್ರಾಫಿಕ್ ಕಿರಿಕಿರಿಗೆ ಮತ್ತೊಂದು ಪರಿಹಾರ ಸಿದ್ಧವಾಗಿದೆ. 2022ರ ಜನವರಿಂದ ದಕ್ಷಿಣ ಮುಂಬೈ (South Mumbai) ಹಾಗೂ ನವೀ ಮುಂಬೈ (Navi Mumbai) ನಡುವೆ ವಾಟರ್ ಟ್ಯಾಕ್ಸಿ (Water Taxi) ಸೇವೆಗಳು ಆರಂಭವಾಗಲಿದೆ. ಈವರೆಗೂ ದಕ್ಷಿಣ ಮುಂಬೈ ನಿಂದ ನವೀ ಮುಂಬೈಗೆ ಪ್ರಯಾಣ ಮಾಡಬೇಕಾದಲ್ಲಿ ರಸ್ತೆ ಅಥವಾ ರೈಲು ಮಾರ್ಗವನ್ನು ಅವಲಂಬಿಸುತ್ತಿದ್ದ ಮುಂಬೈ ಜನತೆಗೆ ಪರಿಹಾರದ ರೂಪದಲ್ಲಿ ವಾಟರ್ ಟ್ಯಾಕ್ಸಿ ಸೇವೆಗಳು ಆರಂಭವಾಗಲಿದೆ. ಮುಂಬೈನಲ್ಲಿ ವಾಟರ್ ಟ್ಯಾಕ್ಸಿ ಆರಂಭಿಸುವ ಕುರಿತಾಗಿ ಬಹಳ ವರ್ಷಗಳಿಂದಲೂ ಮಾತುಕತೆಗಳಿದ್ದರೂ ಈಗ ಅದು ಕಾರ್ಯರೂಪದ ಹಂತ ತಲುಪಿದೆ.

ಫೆರ್ರಿ ವಾರ್ಫ್ ನಲ್ಲಿರುವ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (Domestic Cruise Terminal) (ಡಿಸಿಟಿ) ನಿಂದ ಬೇಲಾಪುರ್ (Belapur ) ಹಾಗೂ ನರುಲ್ (Nerul) ವರೆಗೆ ಮೊದಲ ಹಂತದಲ್ಲಿ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಅದರೊಂದಿಗೆ ರಾಜ್ಯ ಸರ್ಕಾರ ಕೂಡ ಕೆಲ ಮಾರ್ಗಗಳನ್ನು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಆ ಮಾರ್ಗಗಳಲ್ಲಿಯೂ ವಾಟರ್ ಟ್ಯಾಕ್ಸಿ ಸಾಗಲಿದೆ. ಇಂಟರ್ ನ್ಯಾಷನಲ್ ಕ್ರೂಸ್ ಟರ್ಮಿನಲ್ (International Cruise Terminal ) (ಐಸಿಟಿ) ನಿಂದ ಎಲಿಫೆಂಟಾ, ಡಿಸಿಟಿಯಿಂದ ರೇವಾಸ್, ಧರ್ಮಾತರ್, ಕರಂಜಾದೆ ಅಲ್ಲದೆ, ಡಿಸಿಟಿಯಿಂದ ಬೇಲಾಪುರ್, ನರುಲ್, ಐರೋಲಿ, ವಾಶಿ, ಕಂಡೇರಿ ಐಸ್ಲೆಂಡ್ಸ್ ಹಾಗೂ ಜವಹಾರ್ ಲಾಲ್ ನೆಹರು ಪೋರ್ಟ್ (JNPT)ಗೂ ವಾಟರ್ ಟ್ಯಾಕ್ಸ್ ಭಿನ್ನ ಆಪರೇಟರ್ ಗಳ ಸಹಾಯದಿಂದ ಸಂಚರಿಸಲಿದೆ. 

ನಗರದ ಪ್ರಮುಖ ವಾಣಿಜ್ಯ ಜಿಲ್ಲೆಯಾಗಿರುವ ದಕ್ಷಿಣ ಮುಂಬೈನಿಂದ ನವೀ ಮುಂಬೈಗೆ ಪ್ರಯಾಣಿಕರ ಸಂಚಾರವನ್ನು ಗಮನಿಸಿದರೆ, ಡಿಸಿಟಿಯಿಂದ ಜೆಎನ್ ಪಿಟಿಯ ಮಾರ್ಗ ಅತ್ಯಂತ ಬೇಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ. ವಾಟರ್ ಟ್ಯಾಕ್ಸಿ ಆಗಮನದಿಂದಾಗಿ ಹಾರ್ಬರ್ ಲೈನ್ ನಲ್ಲಿರುವ ಲೋಕಲ್ ಟ್ರೇನ್ ಗಳ (Local Train)ಮೇಲಿನ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದೆ. ಪ್ರಸ್ತುತ ರೈಲು ಹಾಗೂ ರಸ್ತೆ ಮಾರ್ಗದ ಹೊರತಾಗಿ ಈ ಎರಡು ಪ್ರದೇಶಗಳನ್ನು ಸಂಪರ್ಕ ಮಾಡುವ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ.
ಮೂರು ಖಾಸಗಿ ಆಪರೇಟರ್ ಗಳೊಂದಿಗೆ ಜನವರಿ 2022ರ ಮೊದಲ ವಾರದಲ್ಲಿ ವಾಟರ್ ಟ್ಯಾಕ್ಸಿ ಸೇವೆಗಳು ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು 2-3 ತಿಂಗಳ ಅವಧಿಯಲ್ಲಿ ನಾಲ್ಕನೇ ಆಪರೇಟರ್ ಸೇರಿಕೊಳ್ಳಲಿದ್ದಾರೆ. ನಿತಿನ್ ಗಡ್ಕರಿ (Nitin Gadkari ) ಶಿಪ್ಪಿಂಗ್ ಸಚಿವರಾಗಿದ್ದ ವೇಳೆ ಮುಂಬೈ ಪೋರ್ಟ್ ಟ್ರಸ್ಟ್, ಡಿಸಿಟಿ ಹಾಗೂ ಸಿಡ್ಕೋ ಕಟ್ಟಡಗಳನ್ನು ಕಟ್ಟಲು ಆರಂಭಿಸಿತ್ತು. 

Parasailing Rope Cuts Off: ತುಂಡಾದ ರೋಪ್‌... ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು
ಪ್ರತಿ ಪ್ರಯಾಣಿಕರಿಗೆ 1200 ರಿಂದ 1500 ರೂಪಾಯಿ ಟಿಕೆಟ್: ಡಿಸಿಟಿಯಿಂದ ನವೀ ಮುಂಬೈವರೆಗಿನ ಪ್ರಯಾಣಕ್ಕೆ ಪ್ರತಿ ಪ್ರಯಾಣಿಕನಿಗೆ 1200 ರಿಂ 1500 ರೂಪಾಯಿ ಟಿಕೆಟ್ ಇರಲಿದೆ. ಇನ್ನು ಡಿಸಿಟಿಯಿಂದ ಜೆಎನ್ ಪಿಟಿಗೆ 750 ರೂಪಾಯಿ ಟಿಕೆಟ್ ಇರುವ ಸಾಧ್ಯತೆ ಇದೆ. ಇನ್ನೊಂದು ಮೂಲಗಳ ಪ್ರಕಾರ ಮುಂಬೈನ ಡಿಸಿಟಿಯಿಂದ (DCT) ನವೀ ಮುಂಬೈನ ಜೆಎನ್ ಪಿಟಿವರೆಗಿನ ಪ್ರಯಾಣದ ಟಿಕೆಟ್ 800 ರಿಂದ 1100 ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ಕಡೆಗಿನ ಪ್ರಯಾಣವನ್ನು ಪೂರ್ತಿ ಮಾಡಲು ವಾಟರ್ ಟ್ಯಾಕ್ಸಿ ಅಂದಾಜು 30 ನಿಮಿಷ ತೆಗೆದುಕೊಳ್ಳುತ್ತದೆ. ಅದರೊಂದಿಗೆ 30 ಕಿಲೋಮೀಟರ್ ವ್ಯಾಪ್ತಿಯ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮುಂಬೈನಲ್ಲಿ ಭಾರೀ ಮಳೆಗಾಲವನ್ನು ಹೊರತುಪಡಿಸಿ ವರ್ಷದ ಉಳಿದೆಲ್ಲಾ ಸಮಯದಲ್ಲಿ ವಾರ್ ಟ್ಯಾಕ್ಸಿಗಳು ಕಾರ್ಯನಿರ್ವಹಣೆ ಮಾಡುತ್ತದೆ. ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಹೆಚ್ಚಿನ ವಾಟರ್ ಟ್ಯಾಕ್ಸಿಗಳು ಲಭ್ಯವಾಗುವಂಥ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. 

Follow Us:
Download App:
  • android
  • ios